ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ವಿದೇಶಿ ಸಿಗರೇಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಶಾರ್ಜಾನಿಂದ ವಿಮಾನದಲ್ಲಿ ಬಂದ 8 ಬಾಕ್ಸ್ಗಳು ಇರುವ ಬಗ್ಗೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ವೇಳೆ ಸಿಕ್ಕ ಬಾಕ್ಸ್ಗಳನ್ನು ಘಿ-ಡಿಚಿಥಿ sಛಿಚಿಟಿಗೆ ಒಳಪಡಿಸಿದಾಗ ಅದರಲ್ಲಿ ಲಕ್ಷಾಂತರ ಮೌಲ್ಯದ ಸಿಗರೇಟ್ ಇರುವುದು ಪತ್ತೆಯಾಗಿತ್ತು. ಎಲ್ಲ 8 ಬಾಕ್ಸ್‌ಗಳಲ್ಲಿ ಬರೋಬ್ಬರಿ 23.97 ಲಕ್ಷ ಮೌಲ್ಯದ 1,59,800 ಸಿಗರೇಟು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
PublicNext
14/10/2020 09:18 am