ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಅನೇಕ ಯುವಕರು ಸಿರಿಯಾದ ಉಗ್ರ ಸಂಘಟನೆಯಾದ ಹಿಜ್ಬುಲ್ ತೆಹ್ರಿರ್ ಸಂಘಟನೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆಯಲ್ಲಿ ಬಯಲಾಗಿದೆ.
ಎನ್ಐಎ ಬೆಂಗಳೂರಿನಲ್ಲಿ ಇತ್ತೀಚೆಗೆ ಹಿಜ್ಬುತ್ ತೆಹ್ರಿರ್ ಉಗ್ರರನ್ನು ಬಂಧಿಸಿತ್ತು. ಈ ಪ್ರಕರಣದ ತನಿಖೆಯ ಬೆನ್ನುಹತ್ತಿದ ಅಧಿಕಾರಿಗಳು 2013-14ರಲ್ಲಿ ಬೆಂಗಳೂರಿನಿಂದ 5 ಯುವಕರು ಸಿರಿಯಾಗೆ ತೆರಳಿದ್ದಾರೆ. ಅವರನ್ನು ಬಂಧಿತ ಆರೋಪಿಗಳಾದ ಇರ್ಫಾನ್ ನಾಸೀರ್ ಮತ್ತು ಅಬ್ದುಲ್ ಅಹ್ಮದ್ ಖಾದರ್ ಸಿರಿಯಾಗೆ ಕಳುಹಿಸಿದ್ದಾರೆ. ಖುರಾನ್ ಸರ್ಕಲ್ ಎಂದು ಮಾಡಿಕೊಂಡು ಬೆಂಗಳೂರಿನಿಂದ ಸಿರಿಯಾಗೆ ಕಳುಹಿಸಿ ಐಸಿಸ್ ಪರ ಕೆಲಸ ಮಾಡಲು ಯುವಕರನ್ನು ಈ ಆರೋಪಿಗಳು ಪ್ರಚೋದಿಸುತ್ತಿದ್ದರು ಎಂದು ಮಾಹಿತಿ ಬಹಿರಂಗವಾಗಿದೆ.
2013-14ರಲ್ಲಿ ಸಿರಿಯಾಗೆ ಹೋಗಿದ್ದ ಐವರು ಯುವಕರ ಪೈಕಿ ಇಬ್ಬರು ಸಿರಿಯಾದಲ್ಲಿ ಹತ್ಯೆಯಾಗಿದ್ದಾರೆ. ಭಾರತಕ್ಕೆ ಬಂದಿದ್ದ ಓರ್ವನನ್ನು ಬಂಧಿಸಲಾಗಿದ್ದು, ಇನ್ನುಳಿದ ಇಬ್ಬರು ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಅಷ್ಟೇ ಅಲ್ಲದೆ 2014ರ ಬಳಿಕ ಎಷ್ಟು ಮಂದಿಯನ್ನ ಸಿರಿಯಾಗೆ ಕಳುಹಿಸಿದ್ದಾರೆ ಎಂಬುದು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.
PublicNext
13/10/2020 08:48 am