ರಾಯಚೂರು: ಚಲಿಸುತ್ತಿದ್ದ ಲಾರಿ ಸ್ಟೇರಿಂಗ್ ತುಂಡಾದ ಪರಿಣಾಮ ಲಾರಿಯಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾನವಿ ತಾಲೂಕಿನ ಕಲ್ಲೂರು ಸಮೀಪದಲ್ಲಿ ನಡೆದಿದೆ.
ಲಾರಿಯಲ್ಲಿ ಭತ್ತ ಕಟಾವು ಮಾಡುವ ಯಂತ್ರವನ್ನು ಕಾರಟಗಿಯಿಂದ ರಾಯಚೂರಿಗೆ ಸಾಗಿಸಲಾಗುತ್ತಿತ್ತು. ಕಲ್ಲೂರು ಸಮೀಪ ಲಾರಿ ಸ್ಟಿಯರಿಂಗ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮಗುಚಿ ಬಿದ್ದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಮಾನವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರವಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
12/10/2020 04:10 pm