ಚಿತ್ರದುರ್ಗ: ಜನ್ಮ ಕೊಟ್ಟ ತಂದೆಯೇ ಮುಗ್ದ ಮಗಳ ಜೀವ ತೆಗೆದಿರುವ ಘಟನೆ ಗುತ್ತಿದುರ್ಗದಲ್ಲಿ ನಡೆದಿದೆ.
ಹೌದು ಹೆತ್ತ ಮಗಳನ್ನೇ ಕೊಂದು ನೀಚ ತಂದೆ ಊರ ಆಚೆ ಪಾಪಿ ಮಗಳ ಸಮಾಧಿ ಮಾಡಿರುವ ಪ್ರಕರಣ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುತ್ತಿದುರ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಿಂಗಪ್ಪ ಕೊಲೆ ಆರೋಪಿ ಗುತ್ತಿದುರ್ಗದ ಶಶಿಕಲಾಳನ್ನು ಎರನೇ ಮದುವೆಯಾಗಿದ್ದ. 2ನೇ ಹೆಂಡತಿಗೆ ಜನಿಸಿದ ಮಗಳನ್ನೇ ಹತ್ಯೆ ಮಾಡಿದ್ದಾನೆ.
3 ವರ್ಷದ ಸಿರಿಶಾ ಅಪ್ಪನಿಂದಲೇ ಕೊಲೆಯಾದ ನತದೃಷ್ಟ ಮಗಳು.
ಚಿತ್ರದುರ್ಗದಲ್ಲಿ ವಾಸವಿದ್ದ ನಿಂಗಪ್ಪ, ಒಂದು ತಿಂಗಳ ಹಿಂದೆಯೇ ಸಿರಿಶಾಳನ್ನು ಹತ್ಯೆ ಮಾಡಿ ಗ್ರಾಮದ ಹೊರವಲಯದಲ್ಲಿ ಮಣ್ಣು ಮಾಡಿದ್ದ.
ಮಗು ನಾಪತ್ತೆಯಾಗಿರುವ ಬಗ್ಗೆ 20 ದಿನಗಳ ಹಿಂದೆಯೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಶಿಕಲಾ ಪ್ರಕರಣ ದಾಖಲಿಸಿದ್ದರು.
ಮಗಳನ್ನು ತಂದೆಯೇ ಸಮಾಧಿ ಮಾಡಿರುವ ಬಗ್ಗೆ ಗುತ್ತಿದುರ್ಗ ಗ್ರಾಮಸ್ಥರಿಂದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಪೊಲೀರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸತ್ಯ ಬಯಲು ಮಾಡಿದ್ದಾರೆ.
PublicNext
12/10/2020 03:46 pm