ಚಿತ್ರದುರ್ಗ: ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಿರಿಯೂರು ತಾಲೂಕಿನ ಬಾಲೇನಹಳ್ಳಿ ಸಮೀಪ ನಡೆದಿದೆ.
ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ನಿವಾಸಿ ಪ್ರಭಾಕರ್ (38), ವೇಣು (20) ಹಾಗೂ ನಾಗವೇಣಿ (45) ಎಂದು ಮೃತ ದುರ್ಧೈವಿಗಳು. ಬಾಲೇನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 151ಎ ರಲ್ಲಿ ದುರ್ಘಟನೆ ನಡೆದಿದೆ.
ಪ್ರಭಾಕರ್ ಅವರು ಕುಟುಂಬದ ಜೊತೆಗೆ ಕಾರಿನಲ್ಲಿ ಚಳ್ಳಕೆರೆಯಿಂದ ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದರು. ಇನ್ನೂ ಲಾರಿ ಹಿರಿಯೂರು ಕಡೆಯಿಂದ ಬರುತ್ತಿತ್ತು. ಆದರೆ ಬಾಲೇನಹಳ್ಳಿ ಸಮೀಪದಲ್ಲಿ ಕಾರು ವೇಗವಾಗಿ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ವಿಶಾಲಾಕ್ಷಮ್ಮನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
11/10/2020 08:37 am