ವಿಶೇಷ ಕಾರ್ಯಚರಣೆ : ಕೇಶವ ನಾಡಕರ್ಣಿ
Online ವಂಚನೆ ಇದೊಂದು ವ್ಯವಸ್ಥಿತ ಜಾಲ. ಬ್ಯಾಂಕ್ ಹೆಸರಲ್ಲಿ ಫೋನ್ ಮಾಡಿ ಗ್ರಾಹಕರ ವಿವರಗಳನ್ನು ಪಡೆದು ಖಾತೆಯಿಂದ ಹಣ ಎಗರಿಸುತ್ತಿರುವ ಪ್ರಕರಣಗಳು ನಿರಂತವಾಗಿ ನಡೆದಿವೆ. ಈ ಬಗ್ಗೆ ಬ್ಯಾಂಕುಗಳು, ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ನಿತ್ಯ ಟೋಪಿ ಬೀಳುವವರು ಹೆಚ್ಚಾಗುತ್ತಲೇ ಇದ್ದಾರೆ. ಇತ್ತೀಚೆಗಂತೂ ಲಾಟರಿ ಹೆಸರಲ್ಲಿ ವಂಚಿಸುವವರ ಜಾಲ ಸಕ್ರಿಯವಾಗಿದೆ. ಲಕ್ಷ ಲಕ್ಷ ಲಾಟರಿ ಹಣದ ದುರಾಸೆ ಬಲೆಗೆ ಜನ ಬೀಳುತ್ತಲೇ ಇದ್ದಾರೆ.
ಇದಕ್ಕೆ ಮತ್ತೊಂದು ಮೋಸದ ಜಾಲ ಸೇರಿಕೊಂಡಿದೆ. ಅದೇನೆಂದರೆ, ಅತ್ಯಂತ ಪ್ರತಿಷ್ಠಿತ ಕಂಪನಿಗಳ ಲೋಗೋಗಳನ್ನು ಅಕ್ರಮವಾಗಿ ಬಳಸಿ ವೆಬ್ ಸೈಟ್ ತಯಾರಿಸಿ ಸುಶಿಕ್ಷಿತರು, ನಿರುದ್ಯೋಗಗಳನ್ನು ಸುಲಭವಾಗಿ ಬಲೆಗೆ ಬೀಳಿಸುವಲ್ಲಿ ಫೇಕ್ ಕಂಪನಿಗಳು ಯಶಸ್ವಿಯಾಗಿವೆ.
ಜಿಯೊ, ಏರ್ ಟೆಲ್, ಐಡಿಯಾ ,ವೋಡಾಫೋನ್ ಮೊಬೈಲ್ ಸರ್ವಿಸ್ ಪ್ರೊವೈಡರ್ ಗಳು ಹಾಗೂ ಟಾಟಾ ಸ್ಕೈ, ಡಿಟಿಎಚ್ ಸೇರಿದಂತೆ ವಿವಿಧ ಕಂಪನಿಗಳ ಲೋಗೊಗಳನ್ನು ಬೇಫಾಮ್ ಆಗಿ ಬಳಸಿ ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ರಿಚಾರ್ಜ್ ಮಾಡುವುದಾಗಿ ಹೇಳಿದ್ದಾರೆ. ಪ್ರತಿಷ್ಠಿತ ಕಂಪನಿಗಳ ಲೋಗೋ ನೋಡಿ ಬಹುತೇಕರು ಮೋಸ ಹೋಗಿದ್ದಾರೆ.
ಇಷ್ಟು ಮಾತ್ರವಲ್ಲ ಈ ಬ್ಲೇಡ್ ಕಂಪನಿಗಳು ಕೆಲವು ಯುಟೂಬ್ ಬಕರಾಗಳನ್ನು ಪ್ರೊಮೋಟರ್ ಮಾಡಿಕೊಂಡು ಅವರಿಂದ ಕನ್ನಡ,ಹಿಂದಿ ಇಂಗ್ಲೀಷ್ ಗಳಲ್ಲಿ ತಮ್ಮ ಕಂಪನಿಗಳ ವಿಡಿಯೊ ಪ್ರಚಾರ ಮಾಡಿಸುತ್ತಿದ್ದಾರೆ. ಈ ಬಕರಾಗಳು ತಾವು ಮೋಸ ಹೋಗಿದ್ದಲ್ಲದೆ ಸಾವಿರಾರು ಜನರನ್ನು ತಮ್ಮ ಪ್ರತಿನಿಧಿಗಳನ್ನಾಗಿ ಮಾಡಿಕೊಂಡು ಈಗ ಕೈ ಕೈ ಹಿಸುಕುತ್ತ ಕುಳಿತಿದ್ದಾರೆ.
ಈ ಪ್ರಮೋಟರುಗಳ ಕೆಳಗೆ ಪ್ರತಿನಿಧಿಗಳಾಗಿ ಬೇರೆ ಬೇರೆಯವರಿಗೆ ಸದಸ್ಯತ್ವ ನೀಡಿದವರ ಕಿರುಕಳಕ್ಕೆ ಬೇಸತ್ತು ಅನೇಕರು ತಮ್ಮ ಮೋಬೈಲ್ ಸ್ಚಿಚ್ ಆಫ್ ಮಾಡಿದ್ದರೆ ಇನ್ನು ಕೆಲವರು ಸದಸ್ಯರಿಗೆ ಸಮಜಾಯಿಸಿ ನೀಡಲು ಹೆಣಗಾಡುತ್ತಿದ್ದಾರೆ.
ಇದಕ್ಕೆ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಅಥವಾ Pyramid ಸೇಲ್ಸ್ ಮಾರ್ಕೆಟಿಂಗ್ ಎನ್ನುತ್ತಾರೆ. ಇಲ್ಲಿ ಕಂಪನಿಗಳು ತಮ್ಮ ಉತ್ಪಾದನೆ ಹಾಗೂ ಸೇವೆಗಳನ್ನು ಮಾರಾಟಗಾರರ ಮೂಲಕ ನಡೆಸುತ್ತವೆ. ಸೇಲ್ಸಮನ್ ಗಳೇ ಇಲ್ಲಿ ಖರೀದಾರರು ಹಾಗೂ ಗ್ರಾಹಕರು. ಆದರೆ ಅನೇಕ ಪ್ರತಿಷ್ಠಿತ ಕಂಪನಿಗಳು ಎಂಎಲ್ ಎಂ ಉದ್ಯಮದ ಮೂಲಕ ಲಕ್ಷಾಂತರ ಗೃಹಿಣಿಯರಿಗೆ ನಿರುದ್ಯೋಗಿಗಳಿಗೆ ನೆರವಾಗಿವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಈ Multi Level Marketing ನಿಯಂತ್ರಿಸಲು ಹಾಗೂ Online ವಂಚನೆ ತಡೆಯುವಂತಹ ಕಠಿಣ ಕಾನೂನು ಭಾರತದಲ್ಲಿ ಇಲ್ಲದ ಕಾರಣ ಅನೇಕ ಬ್ಲೇಡ್ ಕಂಪನಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡು, ಅಮಾಯಕರಿಂದ ಕೋಟ್ಯಂತರ ಹಣ ದೋಚಿ ಮಾಯವಾಗುತ್ತಿವೆ. ವಿದೇಶಿ ಫ್ರಾಡ್ ಕಂಪನಿಗಳಿಗಂತೂ ಭಾರತ ಪ್ರಶಸ್ತ ಸ್ಥಳವಾಗಿದೆ.
ಒಂದು ಕಂಪನಿ ಹೆಸರಲ್ಲಿ ವೆಬ್ ಸೈಟ್ ತೆಗದು ಅದರಲ್ಲಿ ಸುಂದರ ಹುಡುಗಿಯರ ಫೊಟೊ ಹಾಕಿ ಆಕರ್ಷಕ ಬಹುಮಾನಗಳ ಆಸೆ ತೋರಿಸುವುದರೊಂದಿಗೆ ಕೇವಲ 1250 ರೂಪಾಯಿಯಲ್ಲಿ ಯಾವುದೇ ಕಂಪನಿ ಸಿಮ್ ಒಂದು ವರ್ಷದವರೆಗೆ ರಿಚಾರ್ಜ್ ಮಾಡುವುದಾಗಿ ಪ್ರಚಾರ ಮಾಡಿತ್ತು ಒಂದು ಬ್ಲೇಡ್ ಕಂಪನಿ.
ಆರಂಭದಲ್ಲಿ ಕೆಲವರಿಗೆ ರಿಚಾರ್ಜ್ ಮಾಡಿಕೊಟ್ಟ ಈ ಕಂಪನಿ ತನ್ನ ಮೋಸದ ಜಾಲ ಬೀಸಿತು. ನಂತರ ದುರಾಸೆಗೆ ಬಿದ್ದು ಲಕ್ಷಾಂತರ ಸದಸ್ಯರು 1250 ಕೊಟ್ಟು ಅವರ ವೆಬ್ ಸೈಟ್ ದಲ್ಲಿ ರಜಿಸ್ಟರ್ ಆದರು. ಕೆಲವು ತಿಂಗಳ ನಂತರ ವೆಬ್ ಸೈಟ್ ಕ್ಲೋಜ್. ಇದೇ ಕಂಪನಿ ತಮ್ಮ ಮೊದಲಿನ ವೆಬ್ ಸೈಟ್ ಬದಲಾವಣೆ ಮಾಡಿ ಅದಕ್ಕೆ ಮರು ಜೀವ (ಅದಕ್ಕೆ ಕಂಪನಿ Rebirth ಎನ್ನುತ್ತದೆ.) ನೀಡಿದೆ. ಆದರೆ ಅಷ್ಟರಲ್ಲಿ ನಮ್ಮ ನಿಮ್ಮೆಲ್ಲರ ಹಣ ಗುಳುಂ.
ಅಂದರೆ ಹೊಸ ರೂಪ ಪಡೆದ ಕಂಪನಿಗೂ ನಿಮಗೂ ಯಾವುದೇ ಸಂಬಂಧವಿಲ್ಲ. ಅಂದರೆ ನಿಮ್ಮ ಹಿಂದಿನ ಕಂಪನಿಯ ಪ್ಲ್ಯಾನ್ ಢಮಾರ್, Rebirth ಆದ ಅವರದೇ ಕಂಪನಿಯ ಹೊಸ ನಿಬಂಧನೆಗೆ ಒಳಗಾಗಬೇಕು. ಹಿಂದೆ ನೀವು ಕೊಟ್ಟ ಹಣ ಗುಳುಂ.
ದಿಲ್ಲಿಯಲ್ಲಿ ಕುಳಿತು ವ್ಯವಸ್ಥಿತ ಜಾಲ ರೂಪಿಸಿರುವ ಖದೀಮನೊಬ್ಬ ಕರ್ನಾಟಕದಲ್ಲಿ ಕೆಲವರನ್ನು ಸಹಾಯಕರನ್ನಾಗಿ ನೇಮಕ ಮಾಡಕೊಂಡು ನಾಲ್ಕು ಲಕ್ಷ ಜನರಿಂದ 5 ಕೋಟಿಗೂ ಹೆಚ್ಚು ಹಣವನ್ನು ತಮ್ಮ ವೆಬ್ ಸೈಟ್ ಮೂಲಕ ಸಂಗ್ರಹಿಸಿ ಈಗ ಪರಾರಿಯಾಗಿದ್ದಾನೆ. ರಾಜ್ಯದಲ್ಲಿ ಈ ವಂಚನೆ ಜಾಲದಾಲ್ಲಿ ಭಾಗಿಯಾಗಿರುವವರೂ ಆತನೊಂದಿಗೆ ದಿಲ್ಲಿಗೆ ಕಾಲ್ಕಿತ್ತಿದ್ದಾರೆ ಎಂಬ ವರದಿಗಳು ಬಂದಿವೆ.
ಕರ್ನಾಟಕದಲ್ಲಿ ಲಕ್ಷಾಂತರ ಜನರ ತಲೆ ಕ್ಲೀನ್ Shave ಮಾಡಿರುವ ಈ ಕಂಪನಿ ಈಗ ಮಧ್ಯ ಪ್ರದೇಶದ ಇಂದೋರ್ ದಲ್ಲಿ ತನ್ನ ವಂಚನೆ ಜಾಲ ಬೀಸಲು ಸಜ್ಜಾಗಿದೆ ಎಂಬ ಮಾಹಿತಿ ಇದೆ.
ಕರ್ನಾಟಕದಲ್ಲಿ ಈ ವಂಚನೆ ಜಾಲ ಬೀಸುವಲ್ಲಿ ತಮ್ಮ ಕೊಡುಗೆ ನೀಡದವರು ಯಾರು? ದಿಲ್ಲಿಯಲ್ಲಿ ಕುಳಿತು ಇದನ್ನು ನಿಯಂತ್ರಿಸಿದ ವ್ಯಕ್ತಿ ಯಾರು? ತಮ್ಮ ಸದಸ್ಯರ ಮೊಬೈಲ್ ರಿಚಾರ್ಜ್ ಮಾಡಿಸಿ ಇಲ್ಲವೇ ಹಣ ಮರಳಿಸಿ ಎಂದು ಅನೇಕ ಏಜೆಂಟರುಗಳು ತಮ್ಮ ಪ್ರಮೋಟರ್ ಗಳ ದುಂಬಾಲು ಬಿದ್ದಿರುವ ವಿಷಯವನ್ನು ಮುಂದಿನ ಕಂತಿನಲ್ಲಿ PublicNext ಬೆಳಕಿಗೆ ತರಲಿದೆ.
PublicNext
09/10/2020 06:12 pm