ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ : SP ಗೆ ಬಂದ ಪತ್ರದಲ್ಲಿ ಅಪರಾಧಿಗಳ ಸುಳಿವು!

ನವದೆಹಲಿ:ಇಡೀ ದೇಶವನ್ನು ತಲ್ಲಣಗೊಳಿಸಿರುವ ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ಸದ್ಯ ಹೊಸ ತಿರುವು ಪಡೆದುಕೊಂಡಿದೆ.

ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶ ಪೊಲೀಸರಿಗೆ ಪತ್ರ ಬರೆದಿದ್ದು, ಸಹೋದರ ಮತ್ತು ತಾಯಿಯೇ 19 ವರ್ಷದ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.

ನಾಲ್ವರೂ ಆರೋಪಿಗಳೂ ಈ ಪತ್ರಕ್ಕೆ ಸಹಿ ಹಾಕಿದ್ದು, ಈ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ, ಆದರೂ ಸಹ ನಮ್ಮನ್ನು ವಿನಾ ಕಾರಣ ಈ ಪ್ರಕರಣದಲ್ಲಿ ಸುಳ್ಳು ಆರೋಪಗಳೊಂದಿಗೆ ಸಿಲುಕಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂದೀಪ್, ರಾಮು, ಲವಕುಶ್ ಹಾಗೂ ರವಿ ಅವರುಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರ ಬರೆದಿದ್ದು, ಹೆಬ್ಬೆಟ್ಟು ಹಾಕಿದ್ದಾರೆ.

ಸಂತ್ರಸ್ತೆಯ ಪರಿಚಯ ನನಗೆ ಇತ್ತು. ಆಕೆಯೊಂದಿಗೆ ದೀರ್ಘಕಾಲದಿಂದಲೂ ಸಂಪರ್ಕದಲ್ಲಿದ್ದೆ. ಆದರೆ ಈ ಕೊಲೆ ಅಥವಾ ಅತ್ಯಾಚಾರವನ್ನು ನಾನು ಮಾಡಿಲ್ಲ.

ನಾನು ಸಂತ್ರಸ್ತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆಕೆಯ ಸಾವಿಗೆ ಆಕೆಯ ಸಹೋದರ ಹಾಗೂ ತಾಯಿಯೇ ಕಾರಣ, ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸಲಾಗಿದೆ ಎಂದು ಆರೋಪಿ ಸಂದೀಪ್ ಪತ್ರದಲ್ಲಿ ತಿಳಿಸಿದ್ದಾನೆ.

Edited By : Nirmala Aralikatti
PublicNext

PublicNext

08/10/2020 11:11 am

Cinque Terre

89.66 K

Cinque Terre

17