ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಪರಿಹಾರ ನಿಧಿ ಮೇಲೆ ಖದೀಮರ ಕಣ್ಣು : ಹಣ ಎಗರಿಸಲು ಯತ್ನಸಿದವರು ಅರೆಸ್ಟ್

ಕಷ್ಟದಲ್ಲಿದ್ದವರಿಗೆ ನೆರವಾಗಲೆಂದು ಮುಖ್ಯಮಂತ್ರಿ ಪರಿಹಾರ ನಿಧಿಗಳನ್ನು ಸ್ಥಾಪಿಸಲಾಗಿದೆ. ಆದರೆ, ಈ ನಿಧಿಗಳ ಹಣವನ್ನು ಕಷ್ಟದಲ್ಲಿರುವ ಬಡವರಿಗೆ ನೀಡುವುದು ಪ್ರಮುಖ ಉದ್ದೇಶ.

ಆದರೆ ಆಂಧ್ರದಲ್ಲಿ ಬಡವರ ನಿಧಿಯ ಹಣ ಲಪಟಾಯಿಸಲು ಯತ್ನ ನಡೆದಿದೆ. ಈ ಪ್ರಕರಣ ಸಂಬಂಧ ತುಳು ಸಿನಿಮಾ ನಿರ್ಮಾಪಕ ಉದಯ್ ಕುಮಾರ್ ಕಾಂತಾವರ ಸೇರಿದಂತೆ ಮೂವರನ್ನು ಮೂಡಬಿದ್ರೆಯಲ್ಲಿ ಆಂಧ್ರ ಪೊಲೀಸರು ಬಂಧಿಸಿದ್ದಾರೆ.

ಸಿಎಂ ಪರಿಹಾರ ನಿಧಿಯಿಂದ ನೀಡಿದ್ದ ಚೆಕ್ ಗಳನ್ನು ತಿರುಚಿ 117 ಕೋಟಿ ರೂಪಾಯಿ ಹಣವನ್ನು ಆಂಧ್ರ ಸಿಎಂ ಪರಿಹಾರ ನಿಧಿಯಿಂದ ವಿತ್ ಡ್ರಾ ಮಾಡಲು ಮಂಗಳೂರು ಕೋಸ್ಟಲ್ ವುಡ್ ಸಿನಿಮಾ ನಿರ್ಮಾಪಕ ಯತ್ನಿಸಿದ್ದಾನೆ.

ಸಂಕಷ್ಟದಲ್ಲಿದ್ದ ಆಂಧ್ರದ ವ್ಯಕ್ತಿಯೊಬ್ಬರಿಗೆ 25 ಸಾವಿರ ರೂಪಾಯಿ ಚೆಕ್ ಅನ್ನು ಸಿಎಂ ಪರಿಹಾರ ನಿಧಿಯಿಂದ ನೀಡಲಾಗಿತ್ತು.

ಚೆಕ್ ಪಡೆದ ಖದೀಮ ಅಸಲಿ ಚೆಕ್ ರೀತಿಯೇ ಮತ್ತೊಂದು ನಕಲಿ ಚೆಕ್ ಅನ್ನು ತಯಾರಿಸಿದ್ದಾನೆ.

ಬ್ಯಾಂಕ್ ಗೆ ಹೋಗಿ ಸಿಎಂ ಪರಿಹಾರ ನಿಧಿಯಿಂದ 117 ಕೋಟಿ ರೂಪಾಯಿ ವಿತ್ ಡ್ರಾ ಮಾಡಲು ಯತ್ನಿಸಿದ್ದಾನೆ.

ಈ ವೇಳೆ ಚೆಕ್ ನಲ್ಲಿರುವ ಅಮೌಂಟ್ ಬಗ್ಗೆ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು, ಸಿಎಂ ಪರಿಹಾರ ನಿಧಿಯ ಉಸ್ತುವಾರಿ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ.

ಕೋಟಿಗಟ್ಟಲೇ ಹಣ ವಿತ್ ಡ್ರಾಗೆ ಚೆಕ್ ನೀಡಿದ್ದೀರಾ ಎಂದು ವಿಚಾರಿಸಿದ್ದಾರೆ. ಅಧಿಕಾರಿಗಳು ಅಷ್ಟು ದೊಡ್ಡ ಮೊತ್ತದ ಚೆಕ್ ನೀಡಿಲ್ಲ ಎಂದಿದ್ದಾರೆ.

ನಕಲಿ ಚೆಕ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಆಂಧ್ರ ಸರ್ಕಾರವು ಎಚ್ಚೆತ್ತುಕೊಂಡಿದೆ.

ಇದೇ ರೀತಿ ಸಿಎಂ ಪರಿಹಾರ ನಿಧಿಯ ನಕಲಿ ಚೆಕ್ ಗಳನ್ನು ಬ್ಯಾಂಕ್ ಗೆ ನೀಡಿ ಕೋಟಿಗಟ್ಟಲೇ ಹಣ ಲಪಟಾಯಿಸಲು ಬೇರೆ ಬೇರೆ ಕಡೆ ಕೂಡ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.

ನಕಲಿ ಚೆಕ್ ನೀಡಿ ಸಿಎಂ ಪರಿಹಾರ ನಿಧಿಯಿಂದ ಹಣ ಪಡೆಯಲು ಯತ್ನಿಸಿದ ಆರೋಪಿಗಳ ಪತ್ತೆಗೆ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆಂಧ್ರ ಆರ್ಥಿಕ ಅಪರಾಧ ವಿಭಾಗವು ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ.

Edited By : Nirmala Aralikatti
PublicNext

PublicNext

08/10/2020 10:59 am

Cinque Terre

75.09 K

Cinque Terre

1