ಮಾಜಿ ಸಿಬಿಐ ನಿರ್ದೇಶಕ, ಮಾಜಿ ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಪಾಲ ಅಶ್ವನಿ ಕುಮಾರ್(69) ಅವರ ಮೃತದೇಹ ಇಂದು ಶಿಮ್ಲಾದ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನು ಅಶ್ವನಿ ಕುಮಾರ್ ಅವರೇ ಬರೆದಿದ್ದಾರೆ ಎನ್ನಲಾದ ಡೆತ್ನೋಟ್ ಪೊಲೀಸರಿಗೆ ಸಿಕ್ಕಿದ್ದು ಅದರಲ್ಲಿ.. ಆತ್ಮಹತ್ಯೆಯ ಕುರಿತು ಬರೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಡೆತ್ ನೋಟ್ನ್ನು ಅವರ ಕುಟುಂಬದವರು ದೃಢೀಕರಿಸಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಅಶ್ವನಿ ಕುಮಾರ್ ಅವರು 2006ರಿಂದ 2008ರವರೆಗೆ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು ನಂತರ ಎರಡು ವರ್ಷಗಳ ಕಾಲ ಸಿಬಿಐನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. 2013 ರಲ್ಲಿ ಮಣಿಪುರ ಮತ್ತು ನಾಗಾಲ್ಯಾಂಡ್ನ ರಾಜ್ಯಪಾಲರೂ ಆಗಿದ್ದರು.
PublicNext
08/10/2020 07:52 am