ವಾಷಿಂಗ್ಟನ್: ಗೆಳತಿಗೆ ಹೇಳದೆ ಕಾಂಡೋಮ್‌ಗೆ ಹೋಲ್ ಹಾಕಿ ಸೆಕ್ಸ್ ಮಾಡಿದ 47 ವರ್ಷದ ವ್ಯಕ್ತಿ ಜೈಲು ಪಾಲಾದ ಘಟನೆ ಅಮೆರಿಕದ ವೋರ್ಸೆಸ್ಟರ್ ನಲ್ಲಿ ನಡೆದಿದೆ.
47 ವರ್ಷದ ಆಂಡ್ರ್ಯೂ ಲೂಯಿಸ್ ಕಾಂಡೋಮ್‌ಗೆ ಹೋಲ್ ಹಾಕಿ ಜೈಲು ಸೇರಿದ ಆರೋಪಿ. ರೈಲು ಚಾಲಕನಾಗಿರುವ ಆಂಡ್ರ್ಯೂ ಲೂಯಿಸ್ 2018ರಲ್ಲಿ ತನ್ನ ಗೆಳತಿಯೊಂದಿಗೆ ಸೆಕ್ಸ್ ಮಾಡುವುದಕ್ಕೂ ಮುನ್ನ ಕಾಂಡೋಮ್‌ಗೆ ಪಿನ್‌ನಿಂದ ರಂಧ್ರಗಳನ್ನು ಹಾಕಿದ್ದ. ಸೆಕ್ಸ್ ಬಳಿಕ ಯುವತಿಯು ಕಾಂಡೋಮ್‌ನಲ್ಲಿ ರಂಧ್ರ ಇರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಳು. ಹೀಗಾಗಿ ಆರೋಪಿ ಲೂಯಿಸ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ವೋರ್ಸೆಸ್ಟರ್ ಕ್ರೌನ್ ಕೋರ್ಟ್, ಇದು ಅಸಾಮಾನ್ಯ ಪ್ರಕರಣ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ಆರೋಪಿಗೆ ನಾಲ್ಕು ವರ್ಷಗಳ ಕಾಲ ಜೈಲಿ ವಿಧಿಸಿ ತೀರ್ಪು ನೀಡಿದೆ.
PublicNext
05/10/2020 03:13 pm