ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನನ್ನ ಸಾವಿಗೇ ಆ ದೇವರೇ ಕಾರಣ'- ವಿಷ ಸೇವಿಸಿದ ಡಾಕ್ಟರ್, ಮಕ್ಕಳೊಂದಿಗೆ ನೀರಿನ ಟ್ಯಾಂಕಿಗೆ ಹಾರಿದ ಪತ್ನಿ

ಚಂಡೀಗಢ: ವೈದ್ಯ ಪತಿ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿದ ಪತ್ನಿ ಇಬ್ಬರು ಮಕ್ಕಳ ಜೊತೆ ನೀರಿನ ಟ್ಯಾಂಕಿಗೆ ಹಾರಿರುವ ಹೃದಯ ವಿದ್ರಾವಕ ಘಟನೆ ಹರ್ಯಾಣದಲ್ಲಿ ನಡೆದಿದೆ.

ರೋಹ್ಟಕ್ ಮೃತ ವೈದ್ಯ ಪ್ರಮೋದ್ ಸಹಾರಣ್ ರೋಹ್ಟಕ್ ನಗರದ ಹೆಲ್ತ್ ಯೂನಿವರ್ಸಿಟಿಯ ನರ್ಸಿಂಗ್ ಕಾಲೇಜಿನ ಉಪನ್ಯಾಸಕರಾಗಿದ್ದರು. ಬುಧವಾರ ಸಂಜೆ ಆರು ಗಂಟೆಗೆ ಕಹ್ನೊಲಿ ಗ್ರಾಮದ ಬಳಿ ಕಾರ್ ನಿಲ್ಲಿಸಿ ವಿಷ ಸೇವಿಸಿದ್ದಾರೆ. ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಲಭ್ಯವಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ 'ಜೀವನದಲ್ಲಿ ಓಡಾಟಗಳಿಂದ ಬೇಸುತ್ತಿದ್ದೇನೆ. ನನ್ನ ಸಾವಿಗೆ ಆ ದೇವರೇ ಹೊಣೆ. ಪೊಲೀಸರು ನನ್ನ ಸಾವಿಗೆ ಯಾರನ್ನು ಹೊಣೆ ಮಾಡಬೇಡಿ' ಎಂದು ಪ್ರಮೋದ್ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.

ಇತ್ತ ಪತಿಯ ಸಾವಿನ ಸುದ್ದಿ ತಿಳಿಯುತ್ತಲೇ ಪತ್ನಿ ಮೀನಾಕ್ಷಿ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಸೋನಿಪತ್ ರಸ್ತೆಯ ಸೆಕ್ಟೆರ್ 2ರಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ ಇಬ್ಬರು ಮಕ್ಕಳ ಸಮೇತ ಜಿಗಿದಿದ್ದಾರೆ. ಆದರೆ ಪವಾಡ ರೀತಿಯಲ್ಲಿ ಹಿರಿಯ ಮಗಳ ಈಜಿಕೊಂಡು ಮೇಲೆ ಬಂದಿದ್ದಾಳೆ.

Edited By : Vijay Kumar
PublicNext

PublicNext

24/09/2020 09:51 pm

Cinque Terre

86.15 K

Cinque Terre

11

ಸಂಬಂಧಿತ ಸುದ್ದಿ