ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟಿಕೆ ಗನ್ ಹಿಡಿದು 2 ಬ್ಯಾಂಕ್‌ಗಳಲ್ಲಿ 12 ಲಕ್ಷ ರೂ. ದೋಚಿದ ಉದ್ಯಮಿ

ಭುವನೇಶ್ವರ: ಆಟಿಕೆ ಗನ್ ಹಿಡಿದು ಎರಡು ಬ್ಯಾಂಕ್‌ಗಳಲ್ಲಿ 12 ಲಕ್ಷ ರೂ. ದೋಚಿದ್ದ 25 ವರ್ಷದ ಉದ್ಯಮಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಸೌಮ್ಯರಂಜನ್ ಜೆನಾ, ಅಲಿಯಾಸ್ ತುಳು ಬಂಧಿತ ಉದ್ಯಮಿ. ಆರೋಪಿಯು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ದರೋಡೆ ಮಾಡುವುದು ಹೇಗೆ ಎಂದು ಪ್ಲಾನ್ ರೂಪಿಸಿದ್ದರು. ಅದರಂತೆ ಸೆಪ್ಟೆಂಬರ್ 7 ಹಾಗೂ 28ರಂದು ವಿವಿಧ ಸ್ಥಳಗಳ ಎರಡು ಬ್ಯಾಂಕ್‌ನಲ್ಲಿ ಆಟಿಕೆ ಗನ್ ತೋರಿಸಿ ಸುಮಾರು 12 ಲಕ್ಷ ರೂ. ದೋಚಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ 10 ಲಕ್ಷ ರೂ.ಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾರೆ. ಬಂಧಿತ ಸೌಮ್ಯರಂಜನ್ ಎರಡೂ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದು, 19 ಲಕ್ಷ ರೂ. ಸಾಲ ಪಡೆದಿದ್ದ.

Edited By : Vijay Kumar
PublicNext

PublicNext

05/10/2020 07:02 pm

Cinque Terre

55.49 K

Cinque Terre

3