ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಕುತೂಹಲ ಕೆರಳಿಸಿದ 'ಅಂಬುಜಾ' ಟ್ರೇಲರ್: ಇದು ನೈಜ ಘಟನೆ ಅಂತೆ

ಇತ್ತೀಚಿನ ದಿನಗಳಲ್ಲಿ ಹಾರರ್, ಸಸ್ಪೆನ್ಸ್ ಇರುವ ಸಿನಿಮಾಗಳು ಕಡಿಮೆಯಾಗಿವೆ ಎನ್ನಬಹುದು. ಈಗ ಆ ಅಂತರ ತುಂಬಿಕೊಳ್ಳಲು 'ಅಂಬುಜಾ' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.

ಶುಭಾ ಪೂಂಜಾ, ಹಾಗೂ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜನಿ ಅವರು ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರಕಥೆ, ಸಾಹಿತ್ಯ ಬರೆದ ಕಾಶಿನಾಥ್ ಡಿ ಮಡಿವಾಳರ್ ಅವರು ಮೊದಲ ಬಾರಿಗೆ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ್ದಾರೆ. ಇನ್ನು ಶ್ರೀನಿ ಹನುಮಂತರಾಜು ಅವರು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಲಂಬಾಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಜನಿ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇದು ಕಮರ್ಷಿಯಲ್ ಚಿತ್ರ ಆದರೂ ಕುಟುಂಬ ಸಮೇತ ನೋಡಬಹುದಾದ ಕಥಾ ಹಂದರ ಇದೆ ಎನ್ನುತ್ತೆ ಚಿತ್ರ ತಂಡ.

Edited By : Nagaraj Tulugeri
PublicNext

PublicNext

12/10/2022 06:47 pm

Cinque Terre

261.44 K

Cinque Terre

0