ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿ ಸದ್ಯ ಗೆಲುವಿನ ನಾಗಾಲೋಟದಲ್ಲಿ ಓಡುತ್ತಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಚಿತ್ರದ ಬಗ್ಗೆ ಚಂದನವನದಲ್ಲಿ ಈಗಾಗಲೇ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದಲ್ಲದೆ ಕಾಂತಾರ ಚಿತ್ರ ನೋಡಿದ ಪ್ರತಿಯೊಬ್ಬ ವೀಕ್ಷಕ ಸಹ ಒಳ್ಳೆಯ ಪ್ರಶಂಸೆಯನ್ನು ಹಂಚಿಕೊಂಡಿದ್ದಾರೆ, ಇದೀಗ ಆ ಸಾಲಿನಲ್ಲಿ ಕರ್ನಾಟಕ ಚಕ್ರವರ್ತಿ ಬಾದಶಹ ಕಿಚ್ಚ ಸುದೀಪ್ ಪತ್ನಿ ಪ್ರಿಯ ಸುದೀಪ್ ತಮ್ಮ ಪ್ರತಿಕ್ರಿಯೆ ಹಂಚಿಕೊಂಡು ವ್ಹಾವ್ ! ಎಂದಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಪ್ರಿಯ ಸುದೀಪ್ ಈ ನಿರೂಪಣೆಯನ್ನು ಪ್ರಯತ್ನಿಸಲು ನೀವೂ ಎಷ್ಟು ಧೈರ್ಯಶಾಲಿ ರಿಷಬ್ ಶೆಟ್ಟಿ ಅಭಿನಯ ಸಂಪೂರ್ಣವಾಗಿ ಕ್ಲೈಮ್ಯಾಕ್ಸ್ ತುಳುನಾಡಿನ ಸಾರವನ್ನು ಸಾರುತ್ತದೆ ಎಂದಿದ್ದಾರೆ.
ಅಜನೀಶ್ ಬಿ ಸಂಗೀತದಲ್ಲಿ ಚಿತ್ರವನ್ನು ಸೂಕ್ತವಾಗಿ ಸೆರೆ ಹಿಡಿಯಲಾಗಿದೆ. ನಾನು ಹೈದರಾಬಾದ್'ನಲ್ಲಿ ಥಿಯೇಟರ್ ಬಿಟ್ಟಾಗ ನಾನು ವ್ಹಾವ್ ಎಂದು ಹೇಳಿದ್ದೇನೆ ಎಂದಿದ್ದಾರೆ.
PublicNext
07/10/2022 01:14 pm