'ಕಾಂತಾರ' ಸಿನಿಮಾ ಸಿನಿಪ್ರಿಯರ ಮನ ಗೆದ್ದಿದೆ. ದಟ್ಟವಾದ ಕಾಡು. ಅಲ್ಲಿ ಅನೇಕ ವರ್ಷಗಳಿಂದ ನೆಲೆ ಕಂಡ ಮುಗ್ದ ಜನರು. ಅದರಲ್ಲೊಬ್ಬ ಶಿವ ಅಲಿಯಾಸ್ ಶಿವಣ್ಣ.. ಈತನೇ ಸಿನಿಮಾದ ಕಥಾ ನಾಯಕ.. 'ಕಾಂತಾರ' ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರ ಮೈ ಜುಮ್ ಎನ್ನುವಂತೆ ಮಾಡುತ್ತದೆ.. ಅದರಲ್ಲೂ 'ಗುಳಿಗ ದೈವ'ವು ರಿಷಬ್ ಶೆಟ್ಟಿಯನ್ನ ಆವರಿಸಿತೇ ಎಂಬ ಪ್ರಶ್ನೆ ನಮ್ಮಲ್ಲಿ ಹುಟ್ಟಿಕೊಳ್ಳುವುದು ನಿಶ್ಚಿತ..
ಮೇಲ್ನೋಟಕ್ಕೆ ಕಾಂತಾರ ಸಿನಿಮಾವನ್ನು ಕಾಡು ಹಾಗೂ ಮನುಷ್ಯನ ಮಧ್ಯೆದ ಸಂಘರ್ಷ ಎಂಬಂತೆ ಹೊರಜಗತ್ತಿಗೆ ದಾಟಿಸಲಾಗುತ್ತಿದೆ. ಮಂಗಳೂರು ಭಾಗದ ಭೂತಾರಾಧನೆ, ಕೋಲ, ನೃತ್ಯ ಎಲ್ಲವೂ ಸಾಂಸ್ಕೃತಿಕ ಚೌಕಟ್ಟು, ನಂಬಿಕೆ, ಭಕ್ತಿಯ ಪರಾಕಾಷ್ಠೆಯನ್ನು ಬಿಂಬಿಸಿದರೂ ಸಿನಿಮಾದ ಜೀವಾಳವೆಂದರೆ ಅದೇ ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟ.
ಮೊದಲಾರ್ಧ ಭರಪೂರ ಕಾಮಿಡಿ, ಅದ್ಭುತ ಪೈಟ್ಸ್, ಪಕ್ಕಾ ದೇಸಿ ಲವ್ ಟ್ರ್ಯಾಕ್ ಹೊತ್ತು ಸಾಗಿದರೆ ಇಂಟರವಲ್ ಬಿಟ್ಟ ಮೇಲೆ ಸಿನಿಮಾ ಓಡತೊಡಗೋದು ಗೊತ್ತಾಗೋದೇ ಇಲ್ಲ. ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ 'ಕಾಂತಾರ' ಚಿತ್ರಕತೆ ಸಾಗಿ ಕ್ಲೈಮ್ಯಾಕ್ಸ್‌ಗೆ ಬಂದು ನಿಲ್ಲುತ್ತದೆ. ರಿಷಬ್ ಭೂತ ಕಟ್ಟುವ ಸನ್ನಿವೇಶ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ 'ಗುಳಿಗ ದೈವ'ವು ರಿಷಬ್ ಶೆಟ್ಟಿಯನ್ನ ಆವರಿಸಿತೇ ಎನ್ನುವ ಊಹೆ ಹುಟ್ಟು ಹಾಕುತ್ತದೆ. ಈ ವೇಳೆ ಪ್ರೇಕ್ಷಕರಲ್ಲೂ ಒಂದು ವೈಬ್ರೇಷನ್ ಉಂಟಾಗುತ್ತದೆ.
'ಕಾಂತಾರ' ಕಥೆಯನ್ನ ಸುಮ್ಮನೆ ಕೇಳಿದರೆ ಸಾಲದು. ಥಿಯೇಟರ್‌ಗೆ ಹೋಗಿ ನೀವು ನೋಡಿ. ಈಗಾಗಲೇ ಸಿನಿಮಾ ನೋಡಿದ್ದರೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ...
PublicNext
03/10/2022 05:44 pm