ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿ ಖಾನ್ ದಂಪತಿಯು 2 ಕೋಟಿ ರೂ. ಮೌಲ್ಯದ Mercedes-Benz S 350d ಕಾರನ್ನು ಖರೀದಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋಟೋವೊಂದರಲ್ಲಿ ಕರೀನಾ ತಮ್ಮ ನಿವಾಸದಲ್ಲಿ ಹೊಸ ಕಾರನ್ನು ಅನಾವರಣಗೊಳಿಸುವಾಗ ಮಗ ಜೆಹ್ ಅನ್ನು ಹಿಡಿದಿರುವುದನ್ನು ಕಾಣಬಹುದು. ಇತ್ತೀಚೆಗೆ ಕರೀನಾ, ಸೈಫ್ ದಂಪತಿಯು ಜೀಪ್ ರಾಂಗ್ಲರ್ ರೂಬಿಕಾನ್ ಅನ್ನು ಸಹ ಖರೀದಿಸಿದ್ದರು. ಇದರ ಬೆಲೆ ಸುಮಾರು 60 ಲಕ್ಷ ರೂ. ಆಗಿದೆ.
PublicNext
02/10/2022 05:05 pm