ಸೌತ್ ಸ್ಟಾರ್ ಮಹೇಶ್ ಬಾಬು ಇಂದು ತಮ್ಮ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಇನ್ನು ಅಗಲಿದ ಅಮ್ಮನ ಅಂತಿಮ ದರ್ಶನಕ್ಕೆ ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಇನ್ನು ತೆಲುಗು ಚಿತ್ರರಂಗದ ಹಿರಿಯ ನಾಯಕ ನಟ ಕೃಷ್ಣ ಅವರ ಮೊದಲ ಪತ್ನಿ ಇಂದಿರಾ ದೇವಿ. ಅನಾರೋಗ್ಯದ ಸಮಸ್ಯೆಯಿಂದ ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿಂದು ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ಪದ್ಮಾಲಯ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಲಾಗಿದೆ.
ಸದ್ಯ ಅಜ್ಜಿಯನ್ನು ಕಳೆದುಕೊಂಡು ದುಃಖಿಸುತ್ತಿರುವ ಮಹೇಶ್ ಬಾಬು ಪುತ್ರಿ ಸಿತಾರಾ ಅವರನ್ನು ಪ್ರಿನ್ಸ್ ಸಮಾಧಾನ ಪಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ತಾಯಿಯನ್ನು ಕಳೆದುಕೊಂಡ ದುಃಖದಲ್ಲಿಯು ಮಗಳನ್ನು ಸಂತೈಸುತ್ತಿರುವ ಮಹೇಶ್ ಮನಸ್ಸು ನಿಜಕ್ಕೂ ವಿಶಾಲ. ಕಳೆದೊಂದು ವರ್ಷದಲ್ಲಿ ಮಹೇಶ್ ಗೆ ಎರಡು ಆಘಾತಗಳಾಗಿವೆ. ಇಂದು ಅಮ್ಮನನ್ನು ಕಳದುಕೊಂಡ ಪ್ರಿನ್ಸ್ ಜನವರಿಯಲ್ಲಿ, ನಿರ್ಮಾಪಕರಾಗಿದ್ದ ಅವರ ಹಿರಿಯ ಸಹೋದರ ರಮೇಶ್ ಬಾಬು ಅವರನ್ನು ಕಳೆದುಕೊಂಡಿದ್ದರು.
PublicNext
28/09/2022 03:59 pm