ಬೆಂಗಳೂರು: ನಟ ಗೋಲ್ಡನ್ ಸ್ಟಾರ್ ಗಣೇಶ್ ‘ಬಾನ ದಾರಿಯಲ್ಲಿ’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಜಿಯಾಗಿದ್ದಾರೆ. ಶೂಟಿಂಗ್ಗಾಗಿ ಕೀನ್ಯಾಗೆ ತೆರಳಿರುವ ಗಣೇಶ್ ಬಿಡುವಿನ ವೇಳೆ ಅಲ್ಲಿನ ಮಕ್ಕಳೊಂದಿಗೆ ರಸ್ತೆ ಬದಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.
ಗಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ನಲ್ಲಿ ಬರುತ್ತಿರುವ ನಾಲ್ಕನೇ ಸಿನಿಮಾ ಬಾನ ದಾರಿಯಲ್ಲಿ. ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದರೆ, ಗಣೇಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಬಾನ ದಾರಿಯಲ್ಲಿ ಸಿನಿಮಾ ತನ್ನ ಫಸ್ಟ್ ಲುಕ್ನಿಂದಾನೇ ಗಮನ ಸೆಳೆದಿತ್ತು. ಫಸ್ಟ್ ಲುಕ್ ಪೋಸ್ಟರ್ನಲ್ಲಿ ಬುಡಕಟ್ಟು ಜನಾಂಗದ ಜನರನ್ನು ತೋರಿಸಲಾಗಿತ್ತು. ಇದೀಗ ಚಿತ್ರತಂಡ ಆಫ್ರಿಕಾದ ಹಳ್ಳಿಗಳಲ್ಲಿ ಶೂಟಿಂಗ್ನಲ್ಲಿ ಬ್ಯುಜಿಯಾಗಿದ್ದಾರೆ.
ಸದ್ಯ ಕೀನ್ಯಾದಲ್ಲಿರುವ ಗಣೇಶ್ ಇತ್ತೀಚೆಗೆ ಕೀನ್ಯಾದ ಮಾರುಕಟ್ಟೆಯೊಂದರಲ್ಲಿ ಓಡಾಡಿಕೊಂಡು ಹುಡುಕಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಅಲ್ಲಿನ ಮಕ್ಕಳೊಂದಿಗೆ ವಿದೇಶಿ ಹಾಡಿಗೆ ನಗುನಗುತ್ತಾ ಡ್ಯಾನ್ ಮಾಡಿದ್ದಾರೆ. ಅಲ್ಲಿನ ಮಕ್ಕಳು ಕೂಡಾ ಖುಷಿಯಿಂದಲೇ ಗಣೇಶ್ ಜತೆಗೆ ಡ್ಯಾನ್ಸ್ ಮಾಡಿ ಸಂಭ್ರಮ ಪಟ್ಟಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಗಣೇಶ್ Dance n fun with this lovely kids ಎಂದು ಬರೆದುಕೊಂಡಿದ್ದಾರೆ.
ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಾನ ದಾರಿಯಲ್ಲಿ ಚಿತ್ರದಲ್ಲಿ ಗಣೇಶ್ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ರೀಶ್ಮಾ ನಾಣಯ್ಯ ಹಾಗೂ ರಂಗಾಯಣ ರಘು ಮುಂತಾದವರಿದ್ದಾರೆ.
PublicNext
27/09/2022 03:36 pm