ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂತರಕ್ಕೂ ಕಾರಣಿಭೂತರಾದರು “ಅಪ್ಪು”

ರಿಷಬ್ ಶೆಟ್ಟಿ ಮತ್ತು ಕಿಶೋರ್ ನಟಿಸಿರುವ 'ಕಾಂತಾರ' ಸಿನಿಮಾವು ಇದೇ ಸೆ.30ರಂದು ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರ ಟ್ರೇಲರ್ ನಿಂದಲೇ ಈ ಸಿನಿಮಾ ಎಲ್ಲರ ಗಮನಸೆಳೆದಿದೆ. 'ರಿಕ್ಕಿ', 'ಕಿರಿಕ್ ಪಾರ್ಟಿ', 'ಸ.ಹಿ.ಪ್ರಾ. ಶಾಲೆ, ಕಾಸರಗೋಡು' ನಂತರ ರಿಷಬ್ ಶೆಟ್ಟಿ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ.

ಈ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿಯೂ ರಿಷಬ್ ನಟಿಸಿದ್ದಾರೆ. ಆದರೆ ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ, ಈ ಸಿನಿಮಾಗೆ 'ಪವರ್ ಸ್ಟಾರ್' ಡಾ. ಪುನೀತ್ ರಾಜ್ ಕುಮಾರ್ ಅವರು ಹೀರೋ ಆಗಬೇಕಿತ್ತು!

'ಕಾಂತಾರ' ಸಿನಿಮಾವನ್ನು 'ಕೆಜಿಎಫ್' ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಈಚೆಗೆ ಈ ಸಿನಿಮಾದ ಕುರಿತಂತೆ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಇನ್ ಸ್ಟಾಗ್ರಾಮ್ ನಲ್ಲಿ Q and A ನಡೆಸಿದ್ದರು. ಅದರಲ್ಲಿ ಸಾಕಷ್ಟು ಜನ 'ಕಾಂತಾರ' ಬಗ್ಗೆ ಪ್ರಶ್ನೆ ಮಾಡಿದ್ದರು. ಅದರಲ್ಲಿ ನೆಟ್ಟಿಗರೊಬ್ಬರು, 'ಅಪ್ಪು ಒಂದು ಕ್ಲಿಪ್ ಆದರೂ ನೋಡಿದ್ರಾ 'ಕಾಂತಾರ' ಸಿನಿಮಾದ್ದು..' ಎಂದು ಕೇಳಿದ್ದಾರೆ. ಅದಕ್ಕೆ ಅಚ್ಚರಿಯಾದ ಉತ್ತರ ನೀಡಿದ್ದಾರೆ ಕಾರ್ತಿಕ್ ಗೌಡ!

'ಕಾಂತಾರ' ಸಿನಿಮಾದ ಮುಖ್ಯ ಪಾತ್ರದಲ್ಲಿ ಅಪ್ಪು ಸರ್ ನಟಿಸಬೇಕಿತ್ತು. ನಾವು ಒಂದು ನಿರ್ದಿಷ್ಟ ಸೀಸನ್ ನಲ್ಲಿ ಸಿನಿಮಾವನ್ನು ಶೂಟಿಂಗ್ ಮಾಡಬೇಕಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ, ಮುಖ್ಯ ಪಾತ್ರಕ್ಕೆ ರಿಷಬ್ ಅವರ ಹೆಸರನ್ನು ಪುನೀತ್ ಅವರೇ ಸೂಚಿಸಿದ್ದರು' ಎಂದು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

20/09/2022 03:44 pm

Cinque Terre

83.03 K

Cinque Terre

0