ರಿಯಲ್ ಸ್ಟಾರ್ ಉಪೇಂದ್ರ 54ನೇ ವಸಂತಕ್ಕೆ ಕಾಲಿಟ್ಟಿದ್ದು. ತಡರಾತ್ರಿ ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಅಭಿಮಾನಿಗಳ ಜೊತೆ ಉಪೇಂದ್ರ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹಾರ, ಕೇಕ್ ತರದಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಲಾಗಿತ್ತು. ಹೀಗಾಗಿ ರಾತ್ರಿ ನಿವಾಸದ ಬಳಿ ಅಭಿಮಾನಿಗಳು ತಂದಿದ್ದ ಕೇಕ್ ಹಾಗೂ ಹಾರಗಳನ್ನ ಉಪೇಂದ್ರ ಸ್ವೀಕರಿಲ್ಲ.
ಇಂದು ಬೆಳ್ಳಗೆ 10 ಗಂಟೆಯಿಂದ ವಿಶೇಷವಾಗಿ ಅಭಿಮಾನಿಗಳ ಜೊತೆ ಪೋಟೋ ತೆಗೆಸಿಕೊಳ್ಳುವುದರ ಮೂಲಕ ರಿಯಲ್ ಸ್ಟಾರ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
PublicNext
18/09/2022 11:55 am