ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಂದನವನದಲ್ಲಿ ಮತ್ತೆ ME TOO ಸೌಂಡ್‌; ನಿರ್ದೇಶಕನ ಕಿರುಕುಳ ಬಿಚ್ಚಿಟ್ಟ ನಟಿ ಆಶಿತಾ

ಬೆಂಗಳೂರು: ಚಿತ್ರರಂಗದಲ್ಲಿ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳದ ಕುರಿತಂತೆ ಮೀ ಟೂ (ME TOO) 2018ರಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ನಟಿ ಶ್ರುತಿ ಹರಿಹರನ್​ ಅವರು ತಮಗಾಗಿರುವ ಕಹಿ ಅನುಭವಗಳನ್ನು ಬಿಚ್ಚಿಡುತ್ತಲೇ ಹಲವು ನಟಿಯರು ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳೆಯರು ಮೀ ಟೂ ಅಭಿಯಾನವನ್ನೇ ಶುರು ಮಾಡಿದ್ದರು.

ಇದಾದ ಬಳಿಕ ಈ ಅಭಿಯಾನ ಸ್ವಲ್ಪ ತಣ್ಣಗಾಗುತ್ತಾ ಬಂದಿತು. ಈಗ ಮತ್ತೆ ಸ್ಯಾಂಡಲ್​ವುಡ್​ ನಟಿ ಆಶಿತಾ ಚಿತ್ರರಂಗದಲ್ಲಿ ತಮಗಾಗಿರುವ ಕಹಿ ಅನುಭವಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ‘ಬಾ ಬಾರೋ ರಸಿಕ’ ಖ್ಯಾತಿಯ ಆಶಿತಾ, ‘ರೋಡ್ ರೊಮಿಯೋ’ ಸಿನಿಮಾದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಇದಕ್ಕೆ ತಾವು ಚಿತ್ರರಂಗದಲ್ಲಿ ಅನುಭವಿಸಿರುವ ಕಹಿ ಘಟನೆಗಳೇ ಕಾರಣ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅನೇಕ ವರ್ಷದ ಬಳಿಕ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸಿರುವ ಆಶಿತಾ, ನಿರ್ದೇಶಕರೊಬ್ಬರು ತಮಗೆ ನೀಡಿರುವ ಕಿರುಕುಳದ ಕುರಿತು ಹೇಳಿದ್ದಾರೆ. ಆ ನಿರ್ದೇಶಕರ ಹೆಸರು ಹೇಳದ ಆಶಿತಾ, ‘ಆ ನಿರ್ದೇಶಕರ ಹೆಸರು ಸದ್ಯ ಬೇಡ, ಆದರೆ ಅವರಿಂದ ನಾನು ಸಾಕಷ್ಟು ಕಿರುಕುಳ ಅನುಭವಿಸಿದೆ.

ಅವರು ತನ್ನೊಂದಿಗೆ ಸಲುಗೆಯಿಂದ ಇರಲು ನನಗೆ ಪದೇ ಪದೇ ಹೇಳುತ್ತಿದ್ದರು. ಅದಕ್ಕೆ ಒಪ್ಪದಾಗ ಸಾಕಷ್ಟು ಅವಮಾನ ಮಾಡಿದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ’ ಎಂದು ಆಶಿತಾ ಹೇಳಿದ್ದಾರೆ.

Edited By : Abhishek Kamoji
PublicNext

PublicNext

16/09/2022 04:40 pm

Cinque Terre

41.47 K

Cinque Terre

0