ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಇದೀಗ ಹೊಸ ಹಂಚಿಕೊಂಡಿದ್ದಾರೆ. ಸದ್ಯ ಮುದ್ದು ಮಗಳ ಪಾಲನೆಯಲ್ಲಿ ಬ್ಯುಸಿಯಾಗಿರುವ ನಟಿ ತಮ್ಮ ಫಿಟ್ ನೆಸ್ ಕಡೆಗೂ ಅಷ್ಟೇ ಗಮನ ಕೊಡ್ತಿದ್ದಾರೆ. ಹೆರಿಗೆಯ ನಂತರ ಪ್ರಣಿತಾ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ತಿದ್ದಾರೆ.
ಕನ್ನಡದ `ಪೊರ್ಕಿ’ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪರಿಚಿತರಾದ ಪ್ರಣಿತಾ ಬಳಿಕ ಬಹುಭಾಷಾ ನಾಯಕಿಯಾಗಿ ಛಾಪೂ ಮೂಡಿಸಿದ್ದರು. ಬೇಡಿಕೆ ಇರುವಾಗಲೇ ಕಳೆದ ವರ್ಷ ಉದ್ಯಮಿ ನಿತಿನ್ ಜೊತೆ ಹಸೆಮಣೆ ಏರಿದ್ದರು. ಈಗ ಮುದ್ದು ಮಗಳು ಅರ್ನಾ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅದೆಷ್ಟೇ ಬ್ಯುಸಿಯಿದ್ದರು ಕೂಡ ತಮ್ಮ ಫಿಟ್ ನೆಸ್ ಕಡೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ಹೆರಿಗೆಯ ಬಳಿಕ ಮತ್ತಷ್ಟು ಫಿಟ್ ಆ್ಯಂಡ್ ಬ್ಯೂಟಿಫುಲ್ ಆಗಿರುವ ಪ್ರಣಿತಾ ಲುಕ್ ನೋಡಿದ ಫ್ಯಾನ್ಸ್ `ಸಂತೂರ್ ಮಮ್ಮಿ’ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
PublicNext
12/09/2022 03:33 pm