ಪುಷ್ಪ ದಿ ರೈಸ್ ಚಿತ್ರ ತೆರೆಕಂಡು ಸಾಕಷ್ಟು ಹವಾ ಮಾಡಿತ್ತು. ಸದ್ಯ ಪುಷ್ಪ 2 ಕುತೂಹಲ ಹೆಚ್ಚಿದೆ. ಈ ಬಗ್ಗೆ ಬಾಲಿವುಡ್ ಈವೆಂಟ್ ವೊಂದರಲ್ಲಿ ನಟಿ ರಶ್ಮಿಕಾ ಅಪ್ ಡೇಟ್ ನೀಡಿದ್ದಾರೆ.ಪುಷ್ಪ 2 ಚಿತ್ರೀಕರಣ ಸ್ವಲ್ಪ ತಡವಾದರೂ ಸುಕುಮಾರ್ ಅದಕ್ಕೆ ತಕ್ಕಂತೆ ಹೊಸ ರೀತಿಯ ಪ್ಲಾನ್ ಮಾಡಿಕೊಂಡಿದ್ದಾರೆ. ಎಂದಿದ್ದಾರೆ.
ಪುಷ್ಪ ದಿ ರೈಸ್ ಚಿತ್ರದ ಮುಂದುವರಿದ ಭಾಗವಾಗಿ ಪುಷ್ಪ ದಿ ರೂಲ್ ಎಂಬ ಸೀಕ್ವೆಲ್ ಸಿನಿಮಾ ತಯಾರಾಗುತ್ತಿದೆ. ಪುಷ್ಪಾ ಚಿತ್ರಕ್ಕೆ ಸಿಕ್ಕಿರುವ ಸೂಪರ್ ರೆಸ್ಪಾನ್ಸ್ ನೊಂದಿಗೆ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಮೂಡಿದೆ. ತೆಲುಗು ಅಲ್ಲದೆ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ಸೆಪ್ಟೆಂಬರ್ ನಲ್ಲಿ ಪುಷ್ಪಾ ದಿ ರೂಲ್ ಚಿತ್ರೀಕರಣ ಶುರುವಾಗಲಿದೆ ಎಂದಿರುವ ಅವರು ಡೇಟ್ ಬಗ್ಗೆ ಮಾಹಿತಿ ನೀಡಿಲ್ಲ.
PublicNext
07/09/2022 08:06 pm