ಚಂದನವನದ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಒಂದರ ಹಿಂದೆ ಒಂದರಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರಶ್ಮಿಕಾ ಮಂದಣ್ಣ ನಟನೆಯ ಬಹು ನಿರೀಕ್ಷಿತ ಹಿಂದಿ ಸಿನಿಮಾ ಗುಡ್ ಬೈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ.
ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ಗುಡ್ ಬೈ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಕುತೂಹಲ ಇದ್ದು ಇದೀಗ ಚಿತ್ರದ ಫಸ್ಟ್ಲುಕ್ ರಿಲೀಸ್ ಆಗಿದ್ದು ರಶ್ಮಿಕಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಗುಡ್ ಬೈ ಸಿನಿಮಾ ಅನೌನ್ಸ್ ಆದ ದಿನದಿಂದಲೂ ಅಭಿಮಾನಿಗಳು ಅಪ್ ಡೇಟ್ ಗಾಗಿ ಕಾದು ಕೂತಿದ್ದು ಇದೀಗ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಮೆಚ್ಚುಗೆ ಕಾರಣವಾಗಿದೆ.
ಅಮಿತಾಭ್ ಬಚ್ಚನ್ ಹಂಚಿಕೊಂಡ ಪೋಸ್ಟರ್'ನಲ್ಲಿ ಅವರು ನೀಲಿ ಸ್ಲೀವ್ ಲೆಸ್ ಜಾಕೆಟ್ ಧರಿಸಿ ಲೇಯರ್ ಮಾಡಿದ ಬೀಜ್ ಕುರ್ತಾವನ್ನು ಧರಿಸಿರುವುದನ್ನು ಕಾಣಬಹುದು. ಹಿರಿಯ ನಟನ ಮುಖದಲ್ಲಿ ನಗುವನ್ನು ನಾವು ಕಾಣಬಹುದು. ಅವರು ಗಾಳಿಪಟವನ್ನು ಹಾರಿಸುತ್ತಾ ಉತ್ಸುಕರಾದ ಫಸ್ಟ್ ಲುಕ್ ಇದಾಗಿದೆ.
ಗಾಳಿಪಟ ಹಾರಿಸುತ್ತಿರುವ ಅಮಿತಾಬ್ ಬಚ್ಚನ್ ಹಿಂದೆ ಹಿಂದೆ ಹಸಿರು ಬಣ್ಣದ ಕುರ್ತಾ ಮತ್ತು ದುಪಟ್ಟಾ ಧರಿಸಿರುವ ರಶ್ಮಿಕಾ ಮಂದಣ್ಣ ನಿಂತಿದ್ದಾರೆ. ನಟಿ ತನ್ನ ಮುದ್ದಾಗಿ ಗಾಳಿಪಟದ ನೂಲಿನ ಬಂಡಲ್ ಹಿಡಿದ ಫಸ್ಟ್ ಲುಕ್ ಸುಂದರವಾಗಿ ಕಾಣಿಸಿದೆ.
PublicNext
03/09/2022 06:56 pm