ಬೆಂಗಳೂರು : ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಖುಷಿ ಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ʼನಾವು ಜೀವನದ ಹೊಸ ಘಟ್ಟಕ್ಕೆ ಕಾಲಿಡುತ್ತಿದ್ದೇವೆ, ಶೀಘ್ರದಲ್ಲಿ ಬರುತ್ತಿರುವ ನಮ್ಮ ಪುಟ್ಟ ಕಂದಮ್ಮನನ್ನು ಆಶೀರ್ವದಿಸಿ
ಜೈ ಹನುಮಾನ್ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ ಅದ್ಧೂರಿಯಾಗಿ ದ್ರುವ ಸರ್ಜಾ ಗರ್ಭಿಣಿ ಪತ್ನಿ ಪ್ರೇರಣಾ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಫೋಟೋ ಶೂಟ್‌ನಲ್ಲಿ ಕಾಫಿ, ನೀಲಿ, ಪಿಂಕ್ ಬಣ್ಣದ ಗೌನ್‌ನಲ್ಲಿ ಪ್ರೇರಣಾ ಮಿಂಚಿದ್ರೆ, ಬ್ಲ್ಯಾಕ್ ಸೂಟ್, ವೈಟ್ ಆಂಡ್ ವೈಟ್ ಲುಕ್‌ನಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ.
ಬಾಲ್ಯದಿಂದಲೇ ಸ್ನೇಹಿತರಾಗಿದ್ದ ಧ್ರುವ ಸರ್ಜಾ ಹಾಗೂ ಪ್ರೇರಣಾ 2019ರಲ್ಲಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಇನ್ನು ಕ್ಯೂಟ್ ಜೋಡಿಗೆ ಕಾಮೆಂಟ್ ಮೂಲಕ ಮೇಘನಾ ರಾಜ್ ಕಂಗ್ರಾಟ್ಸ್ ಹೇಳಿದ್ದಾರೆ. ಅಭಿಮಾನಿಗಳು ಸಹ ಅಭಿನಂದನೆಗಳನ್ನ ತಿಳಿಸಿದ್ದಾರೆ.
PublicNext
03/09/2022 05:42 pm