ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಥಿಯೇಟರ್‌ನಲ್ಲಿ 'ಲೈಗರ್' ನೋಡಿ ಕಣ್ಣೀರಿಟ್ಟ ನಟ ವಿಜಯ್ ದೇವರಕೊಂಡ

ಹೈದರಾಬಾದ್‌ನ ಸುದರ್ಶನ್ ಚಿತ್ರಮಂದಿರದಲ್ಲಿ 'ಲೈಗರ್' ವೀಕ್ಷಿಸಿದ ನಂತರ ನಟ ವಿಜಯ್ ದೇವರಕೊಂಡ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.

ರೌಡಿ ಸ್ಟಾರ್ ವಿಜಯ್ ದೇವರಕೊಂಡ, ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಅವರ ಚಿತ್ರ ಲೈಗರ್ ಬಗ್ಗೆ ಜನರು ಬಹಳ ನಿರೀಕ್ಷೆ ಹೊಂದಿದ್ದರು. ಇಂಡಿಯಾ ಲೆವೆಲ್ ನಲ್ಲಿ ಬಂದಿರುವ ಈ ಸಿನಿಮಾದ ಟ್ರೇಲರ್ ಒಳ್ಳೆ ಬಜ್ ಕ್ರಿಯೇಟ್ ಮಾಡಿದ್ರೂ ರಿಲೀಸ್ ಬಳಿಕ ಒಳ್ಳೆ ಪ್ರತಿಕ್ರಿಯೆ ಬರಲಿಲ್ಲ.

ಲೈಗರ್ ಸಿನಿಮಾದ ಅವಧಿ ಎರಡು ಗಂಟೆ 20 ನಿಮಿಷ. ಆದರೆ ಈ ಸಿನಿಮಾ ನೋಡಿದ ಪ್ರೇಕ್ಷಕರೆಲ್ಲ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಲೈಗಾರ್ ಕಲೆಕ್ಷನ್ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಥಿಯೇಟರ್ ಮಾಲೀಕರು ಮತ್ತು ವಿತರಕರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ನಟ ವಿಜಯ್‌ ದೇವರಕೊಂಡ ನಿರಾಶೆಗೊಂಡನು ಕಣ್ಣೀರು ಇಟ್ಟಿದ್ದಾರಂತೆ.

Edited By : Vijay Kumar
PublicNext

PublicNext

30/08/2022 01:31 pm

Cinque Terre

20.29 K

Cinque Terre

5