ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೈತ್ರಾ ಕನಸು ನನಸು : ದುಬಾರಿ ಕಾರಿನ ಮುಂದೆ ಬಿಂದಾಸ್ ಪೋಸ್

ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಮತ್ತು ನಿರೂಪಕಿಯಾಗಿರುವ ಚೈತ್ರಾ ವಾಸುದೇವನ್ ತನ್ನ ಡ್ರೀಮ್ ಕಾರ್ ಖರೀದಿಸಿ ಸಂತಸ ಪಟ್ಟಿದ್ದಾರೆ.ನನ್ನ ಅನೇಕ ಸಮಯದ ಕನಸು ನನಸಾಗಿದೆ ಎಂದಿರುವ ಚೈತ್ರಾ ವಾಸುದೇವನ್ ಬಳಿ ಈಗಾಗಲೇ ದುಬಾರಿ ಕಾರು ಇದೆ. ಆದರೀಗ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ.

ಸದ್ಯ ಚೈತ್ರಾ ರೇಂಜ್ ರೋವರ್ ಕಂಪೆನಿಯ Evoque ಮಾಡೆಲ್ ಎಸ್ ಯುವಿ ಅನ್ನು ಖರೀದಿ ಮಾಡಿದ್ದಾರೆ. ಇದರ ಎಕ್ಸ್ ಶೋರೂಂ ಬೆಲೆ 72 ಲಕ್ಷ ರೂಪಾಯಿಯಿಂದ ಆರಂಭ ಆಗಲಿದ್ದು, ಆನ್ ರೋಡ್ ಬೆಲೆ 89 ಲಕ್ಷ ರೂಪಾಯಿ ಇದೆ.ಈ ಬಗ್ಗೆ ಚೈತ್ರಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ನನ್ನ ಮುಂದಿನ ಕಾರ್. ನನ್ನ ಕುಟುಂಬದ ಹೊಸ ಸದಸ್ಯ ಎಂಟ್ರಿ. ರೇಂಜ್ ರೋವರ್, ಗೋಲ್ಡ್' ಎಂದು ಹೇಳಿದ್ದಾರೆ.

ಕಾರು ಖರೀದಿಸಿದ ಸಂತಸವನ್ನು ಹಂಚಿಕೊಳ್ಳುವ ಜೊತೆಗೆ ತನ್ನದೆ ಉಳಿತಾಯದ ಹಣದಲ್ಲಿ ಕಾರು ಖರೀದಿಸಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಹೌದು, 'ದೀರ್ಘ ಸಮಯದ ಉಳಿತಾಯದ ಹಣದಿಂದ ಕೊನೆಗೂ ಕಾರು ಖರೀದಿಸಿದೆ' ಎಂದು ಹೇಳಿದ್ದಾರೆ. ಚೈತ್ರಾ ಅವರಿಗೆ ಅನೇಕರು ಅಭಿನಂದನೆ ತಿಳಿಸುತ್ತಿದ್ದಾರೆ. ಕಾರಿನ ಜೊತೆ ಇರುವ ಸಂಭ್ರಮದಿಂದ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

27/08/2022 01:52 pm

Cinque Terre

22.76 K

Cinque Terre

0