ಮುಂಬೈ: ಪ್ರಸ್ತುತ ಬಾಲಿವುಡ್ ಸಾಲು ಸಾಲು ಚಿತ್ರಗಳೆಲ್ಲ, ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಬಾಯ್ಕಾಟ್ ಅಭಿಯಾನ ಬಾಲಿವುಡ್ ಮಂದಿಗೆ ಬಿಸಿ ತುಪ್ಪವಾಗಿದೆ. ಈ ಬಗ್ಗೆ ಅನೇಕ ಕಲಾವಿದರು ಈಗಾಗಲೇ ತಮ್ಮ ಧ್ವನಿಯೆತ್ತಿದ್ದಾರೆ. ಇದೀಗ ಆ ಸಾಲಿಗೆ ವಿವಾದಿತ ನಟಿ ಎಂದೇ ಖ್ಯಾತರಾಗಿರುವ ಸ್ವರಾ ಭಾಸ್ಕರ್ ಸಹ ಸೇರಿಕೊಂಡಿದ್ದಾರೆ.
ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಸ್ವರಾ, ಈಗ ಏನು ಬಾಲಿವುಡ್ ವಿರೋಧಿಸುವ ಟ್ರೆಂಡ್ ಶುರುವಾಗಿದೆಯೋ, ಅದು ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹೆಚ್ಚಾಗಿದೆ.
ಸುಶಾಂತ್ ಸಾವಿನ ಬಳಿಕ ಎಲ್ಲರು ಬಾಲಿವುಡ್ ಕಡೆ ಬೊಟ್ಟು ಮಾಡುತ್ತಿದ್ದಾರೆ. ಆತನ ಸಾವಿಗೆ ಬಾಲಿವುಡ್ ಹೊಣೆ, ಬಾಲಿವುಡ್ ನಲ್ಲಿರುವ ನೆಪೋಟಿಸಂ ಕಾರಣ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಹೀಗಾಗಿ ಬಾಲಿವುಡ್ ಕಡೆ ದ್ವೇಷದ ಭಾವನೆ ಹೆಚ್ಚಾಗುತ್ತಿರುವ ಪರಿಣಾಮ ಬಾಲಿವುಡ್ ನ ಸಿನಿಮಾಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದರೆ, ಬಾಲಿವುಡ್ ಮತ್ತೆ ತನ್ನ ಹಾದಿಗೆ ಮರಳಿದೆ ಎಂದು ಸ್ವರಾ ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೊನೆಯದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸ್ವರಾ ಅವರ ಸಿನಿಮಾ ವೀರ್ ದಿ ವೆಡ್ಡಿಂಗ್. ತುಂಬಾ ದಿನಗಳ ಬಳಿಕ ಅವರ ಹೊಸ ಸಿನಿಮಾ “ಜಹಾನ್ ಚಾರ್ ಯಾರ್” ಸೆಪ್ಟೆಂಬರ್ 16ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
PublicNext
23/08/2022 06:02 pm