ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಗೆಲ್ಲುತ್ತೋ ಇಲ್ಲವೋ ಎಂಬ ಗುಮಾನಿ ಆರಂಭದಿಂದ ಎಲ್ಲರಿಗೂ ಇತ್ತು. ಈಗ ಅದು ಮೊದಲ ವಾರಾಂತ್ಯಕ್ಕೆ ಕೇವಲ 37 ಕೋಟಿ ರೂ. ಗಳಿಸಿದೆ. ಈ ಮೂಲಕ ಸೋಲುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅಮೀರ್ ಖಾನ್ ನಟನೆಯ ಇತ್ತೀಚಿನ ಸಿನಿಮಾಗಳು ಕಮ್ಮಿ ಅಂದರೂ ಮುನ್ನೂರು ಕೋಟಿಗೂ ಅಧಿಕ ಲಾಭ ಮಾಡಿಕೊಂಡಿವೆ. ಆದ್ರೆ ಸದ್ಯ ಈ ಸಿನಿಮಾದಿಂದ ವಿತರಕರಿಗೆ ನಷ್ಟ ಆಗಿದ್ದು ಇದನ್ನು ಭರಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಆದ್ರೆ 'ಲಾಲ್ ಸಿಂಗ್ ಚಡ್ಡಾ' ಸೋತಿಲ್ಲ ಎಂದು ಚಿತ್ರದ ಮುಖ್ಯಸ್ಥ ಅಜಿತ್ ಅಂಧರೆ ಸ್ಪಷ್ಟನೆ ನೀಡಿದ್ದಾರೆ. ‘ಹೊರಗಿನ ಯಾರೊಬ್ಬರೂ ಈ ಚಿತ್ರವನ್ನು ಹಂಚಿಕೆ ಮಾಡಿಲ್ಲ. Viacom 18 ಸಿನಿಮಾ ಹಂಚಿಕೆ ಮಾಡಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ಸದ್ಯದ ಸ್ಥಿತಿಯಲ್ಲಿ ಯಾವುದೇ ನಷ್ಟ ಉಂಟಾಗಿಲ್ಲ’ ಎಂದಿದ್ದಾರೆ ಅಜಿತ್. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗೆ 180 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕೊವಿಡ್ನಿಂದ ಸಿನಿಮಾದ ಬಜೆಟ್ ಹೆಚ್ಚಿದೆ. ಈ ಚಿತ್ರದ ಕಲೆಕ್ಷನ್ 50 ಕೋಟಿ ರೂಪಾಯಿ ಒಳಗಿದೆ. ಚಿತ್ರದ ಒಟ್ಟೂ ಬಿಸ್ನೆಸ್ 100 ಕೋಟಿ ರೂಪಾಯಿಗೂ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ. ಈ ಕಾರಣದಿಂದ ಚಿತ್ರ 80 ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದೆ ಎನ್ನಲಾಗಿದೆ.
PublicNext
23/08/2022 07:35 am