ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನಗೂ ಆತ್ಮಹತ್ಯೆ ಯೋಚನೆ ಬಂದಿತ್ತು ಎಂದ ದೀಪಿಕಾ ಪಡುಕೋಣೆ

ಮುಂಬೈ: ಬೊಗಸೆಕಂಗಳ, ಹಾಲುಗೆನ್ನೆಯ ಸುರಸುಂದರಿ ಅಪ್ಪಟ ಕನ್ನಡತಿ ದೀಪಿಕಾ ಪಡುಕೋಣೆ ಅವರು ಸದ್ಯ ಬಾಲಿವುಡ್‌ನಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾರೆ. ಬಹುಬೇಡಿಕೆಯ ನಟಿಯಾಗಿದ್ದಾರೆ.

ಎಲ್ಲ ನಟಿಯರ ಹಿಂದೆ ಒಂದೊಂದು ರೀತಿಯ ವೇದನೆ ಇದ್ದೇ ಇರುತ್ತೆ. ಅದೇ ರೀತಿ ನಟಿ ದೀಪಿಕಾ ಪಡುಕೋಣೆ ಕೂಡ ತಮಗೆ ಮಾನಸಿಕ ಖಿನ್ನತೆ ಕಾಡಿತ್ತು ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಿತ್ರರಂಗಕ್ಕೆ ಕಾಲಿಡುವ ಮುನ್ನ ನನಗೆ ಖಿನ್ನತೆ ಕಾಡಿತ್ತು. ಹಾಗೂ ಕೆಲವೊಮ್ಮೆ ಆತ್ಮಹತ್ಯೆಯ ಯೋಚನೆಯೂ ಬಂದಿತ್ತು. ಅದರಿಂದ ಪಾರಾಗಲು ನಾನು ನಿದ್ದೆಯ ಮೊರೆ ಹೋಗುತ್ತಿದ್ದೆ. ಈ ಖಿನ್ನತೆಯಿಂದ ಆಚೆ ಬರಲು ನನಗೆ ನನ್ನ ತಾಯಿ ಸಹಕಾರಿಯಾಗಿದ್ದಾರೆ. ನನ್ನೊಳಗೆ ಆತ್ಮಸ್ಥೈರ್ಯ ತುಂಬಿದ್ದರು ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

06/08/2022 09:12 pm

Cinque Terre

31.3 K

Cinque Terre

7