ಇತ್ತೀಚಿನ ದಿನಗಳಲ್ಲಿ ಕೆಲ ಸಿನಿಮಾ ನಿರ್ದೇಶಕರು ತಮ್ಮ ಚಿತ್ರದ ಪ್ರಚಾರದ ಭರಾಟೆಯಲ್ಲಿ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡುತ್ತಿದ್ದಾರೆ. ಕಾಳಿ ಮಾತಾ ಕೈಯಲ್ಲಿ ಸಿಗರೇಟ್ ಪೋಸ್ಟರ್ ನೋಡಿ ಅಭಿಮಾನಿಗಳು ಗರಂ ಆಗಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. `ಮಾಸೂಮ್ ಸವಾಲ್’ ಚಿತ್ರದ ಪೋಸ್ಟರ್ ನಲ್ಲಿ ಸ್ಯಾನಿಟರಿ ಪ್ಯಾಡ್ ಮೇಲೆ ಭಗವಾನ್ ಕೃಷ್ಣ ಇರುವ ಪೋಸ್ಟರ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸಂತೋಷ್ ಉಪದ್ಯಾಯ ನಿರ್ದೇಶನದ `ಮಾಸೂಮ್ ಸವಾಲ್’ ಪೋಸ್ಟರ್ ರಿಲೀಸ್ ಆಗಿ,ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿ ಮಾಡಿದೆ.
ಚಿತ್ರದಲ್ಲಿ ಮುಟ್ಟಿನ ವಿಚಾರದ ಬಗ್ಗೆಯೇ ಸಿನಿಮಾವಿದೆ. ಹಾಗಾಗಿ ಪ್ಯಾಡ್ ತೋರಿಸಬೇಕಿತ್ತು. ಅದಕ್ಕಾಗಿಯೇ ಸಿನಿಮಾ ಪೋಸ್ಟರ್ ನಲ್ಲಿ ಪ್ಯಾಡ್ ಇದೆಯೇ ಹೊರತು ಭಗವಾನ್ ಕೃಷ್ಣ ಇಲ್ಲ ಎಂದು ನಿರ್ದೇಶಕ ಸಂತೋಷ್ ಪ್ರತಿಕ್ರಿಯೇ ನೀಡಿದ್ದಾರೆ. ಪ್ಯಾಡ್ ಮೇಲೆ ಹಿಂದೂ ದೇವರ ಫೋಟೋ ಇರೋದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ ನಾವು ನೋಡುತ್ತಿರುವ ದೃಷ್ಟಿ ಸರಿಯಲ್ಲ ಅದೇ ತಪ್ಪು ತಿಳುವಳಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ಮಾತನಾಡಿದ್ದಾರೆ.
ಒಟ್ಟಿನಲ್ಲಿ ಆಗಸ್ಟ್ 5ಕ್ಕೆ ʻಮಾಸೂಮ್ ಸವಾಲ್’ ತೆರೆಗೆ ಬರಲಿದೆ. ಸ್ಯಾನಿಟರಿ ಪ್ಯಾಡ್ ಮೇಲೆ ಹಿಂದೂ ದೇವರ ಫೋಟೋವಿರೋದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
PublicNext
03/08/2022 03:52 pm