ಬಾಲಿವುಟ್‌ನ ನಟಿ ಪ್ರಿಯಾಂಕಾ ಚೋಪ್ರಾ ಅವರು ಉಕ್ರೇನ್‌ನ ನಿರಾಶ್ರಿತರನ್ನು ಭೇಟಿ ಮಾಡಲು ಪೋಲೆಂಡ್‌ಗೆ ಭೇಟಿ ನೀಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಯುನಿಸೆಫ್‌ನ ಜಾಗತಿಕ ಸದ್ಭಾವನಾ ರಾಯಭಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಉಕ್ರೇನ್‌ನ ಸಂತ್ರಸ್ತರನ್ನು ಭೇಟಿಯಾಗಿ ಸಂವಾದ ನಡೆಸಿದರು. ಒತ್ತಾಯದಿಂದ ತಮ್ಮ ಮನೆಗಳನ್ನು ತೊರೆದು ಬಂದ ಮಹಿಳೆಯರು ಮತ್ತು ಮಕ್ಕಳು ನಟಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ನಮ್ಮ ನೋವನ್ನು ಹಂಚಿಕೊಂಡರು. ಮಕ್ಕಳು ತಮ್ಮ ಕೈಯಾರೆ ತಯಾರಿಸಿದ ಗೊಂಬೆಗಳನ್ನು ನಟಿ ಪ್ರಿಯಾಂಕಾಗೆ ನೀಡಿ ಮಾತನಾಡಿಸುತ್ತಾರೆ. ಬಳಿಕ ನಿರಾಶ್ರಿತರ ನೋವಿನ ಕಥೆಗಳನ್ನು ಕೇಳಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋವನ್ನು ನಟಿ ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
PublicNext
03/08/2022 07:05 am