ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಸೋಮವಾರ ತಮ್ಮ ಮುದ್ದು ಮಗಳ ಫೋಟೋ ಹಾಗೂ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಜೊತೆಗೆ 'ಈ ಪೋಸ್ಟ್ನಲ್ಲಿ 'ಅರ್ನಾ'ಳನ್ನು ಪರಿಚಯ ಮಾಡಿಸುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದು, ಅಭಿಮಾನಿಗಳು ಮಗಳ ಫೋಟೋ ನೋಡಿ, "ಸೂಪರ್ ಕ್ಯೂಟ್. ಗಾಡ್ ಬ್ಲೆಸ್ ಲಿಟಲ್ ಏಂಜೆಲ್" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ‘ಪೊರ್ಕಿ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಸಹ ಅವರು ಅಭಿನಯಿಸಿ, ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
PublicNext
01/08/2022 03:49 pm