ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದರ್ಶನ್ ಅಭಿಮಾನಿಗಳಿಂದ ಅದ್ದೂರಿಯಾಗಿ ಮೆರವಣಿಗೆ

ವರದಿ- ಈರನಗೌಡ ಪಾಟೀಲ

ಹಾವೇರಿ : ಯಾಲಕ್ಕಿ ನಾಡು ಹಾವೇರಿಯಲ್ಲಿ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಪೋಸ್ಟರ್ ಬಿಡುಗಡೆ ಹಾಗೂ ಬೃಹತ್ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಹೌದು ಹಾವೇರಿ ನಗರದಲ್ಲಿ ಅಖಿಲ ಕರ್ನಾಟಕ ದರ್ಶನ ತೂಗುದೀಪ್ ಅಭಿಮಾನಿಗಳ ಸಂಘ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಬೃಹತ್ ಮೆರವಣಿಗೆ ಹಮ್ಮಿಕೊಂಡು ಮೆರವಣಿಗೆ ಮಾಡಿದರು.

ಪುರಸಿದ್ದೇಶ್ವರ ದೇವಸ್ಥಾನದಿಂದ ಸುಭಾಷ್ ಸರ್ಕಲ್, JH ಪಟೇಲ್ ವೃತ್ತ, ಲಕಮಪೂರ, ಪೀಬಿ ರಸ್ತೆ ಹೊಸಮನಿ ಸಿದ್ದಪ್ಪ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರಾಲಿ ಮೂಲಕ ದಾಸನ ಅಭಿಮಾನಿಗಳು ಮೆರವಣಿಗೆ ಮಾಡಿದರು.

ಮೆರವಣಿಗೆಯುದ್ದಕ್ಕೂ ಡಿ ಬಾಸ್, ಡಿ ಬಾಸ್ ಘೋಷಣೆ ಜೋರಾಗಿತ್ತು. ಈ ವೇಳೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ದರ್ಶನ್ ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

Edited By : Shivu K
PublicNext

PublicNext

28/07/2022 02:37 pm

Cinque Terre

38.87 K

Cinque Terre

0

ಸಂಬಂಧಿತ ಸುದ್ದಿ