ವರದಿ-ಈರನಗೌಡ ಪಾಟೀಲ
ಹಾವೇರಿ: ವಿಶ್ವದಾದ್ಯಂತ ಇಂದು ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯ ಮಾಗಾವಿ ಥಿಯೇಟರ್ ಎದುರು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಚಿತ್ರಮಂದಿರದ ಮುಂದೆ ನಟ 'ಕಿಚ್ಚ ಹಾಗೂ ಪವರ್ ಸ್ಟಾರ್' ಕಟೌಟ ಹಿಡಿದು ನಗರದ ಪ್ರಮುಖ ಮುಖ್ಯ ರಸ್ತೆಯಲ್ಲಿ ಕಿಚ್ಚನ ಅಭಿಮಾನಿಗಳಿಂದ ನಟ ಅಪ್ಪು ಭಾವಚಿತ್ರ ಮೆರವಣಿಗೆ ಮಾಡಿದರು.
ನಟ ಸುದೀಪ್ ಹಾಗೂ ಡಾ.ಪವರ್ ಸ್ಟಾರ್ ಪುನೀತ್ ರಾಜಕುಮಾರ ಕಟೌಟ್ ಹಾಕಿ ಅಭಿಮಾನಿಗಳು ಸಂಭ್ರಮ ಪಟ್ಟರು. ಥಿಯೇಟರ್ ಎದುರು ವಿಕ್ರಾಂತ್ ರೋಣ ಚಿತ್ರದ ಹಾಡಿಗೆ ಸ್ಟೆಪ್ ಹಾಕಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಡೊಳ್ಳು ಬಾರಿಸಿ ಸಂಭ್ರಮಪಟ್ಟರು. ಏಲಕ್ಕಿ ನಾಡಿನ ಕಿಚ್ಚನ ಅಭಿಮಾನಿಗಳು 'ವಿಕ್ರಾಂತ್ ರೋಣ'ನಫಸ್ಟ್ ಷೋ ನೋಡಲು ಮುಗಿಬಿದ್ದಿದ್ದರು. ಈ ವೇಳೆ ನಟ ಸುದೀಪ್‌ಗೆ ಜೈಕಾರ ಕೂಗುತ್ತ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದರು.
PublicNext
28/07/2022 02:23 pm