ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರ ಇಂದು ಜಗತ್ತಿನೆಲ್ಲೆಡೆ ರಿಲೀಸ್ ಆಗಿದೆ. ಈಗಾಗಲೇ ಮೊದಲ ಷೋ ಮುಗಿದಿದ್ದು ಚಿತ್ರ ನೋಡಲು ಅಭಿಮಾನಿಗಳು, ಸಿನಿ ರಸಿಕರು ಮುಗಿಬಿದ್ದಿದ್ದಾರೆ.
ಸುಮಾರು 7ರಿಂದ 8ಸಾವಿರ ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶಿತವಾಗುತ್ತಿದೆ. ಇದು ಕರುನಾಡ ಕಿಚ್ಚನ ವೃತ್ತಿ ಜೀವನದಲ್ಲೇ ಮೊದಲು ಎನ್ನಲಾಗಿದೆ. ಚಿತ್ರವು 2ಡಿ ಮತ್ತು 3ಡಿ ತಂತ್ರಜ್ಞಾನದಲ್ಲಿ ಪ್ರದರ್ಶಿತವಾಗುತ್ತಿದೆ. ಇನ್ನು ರಾಜ್ಯದ 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಪ್ರೇಕ್ಷಕರು 'ವಿಕ್ರಾಂತ್ ರೋಣ'ನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
PublicNext
28/07/2022 12:08 pm