ಎರಡು ಮಕ್ಕಳ ತಾಯಿ ಸ್ಯಾಂಡಲ್ ವುಡ್ ನ ಮುದ್ದು ಹುಡುಗಿ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಮೂಲ್ಯ ಈಗ ಮೊದಲ ಬಾರಿಗೆ ರೀಲ್ಸ್ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟಿ ಅಮೂಲ್ಯ ಮಕ್ಕಳಾದ ಬಳಿಕ ತಮ್ಮ ಇತ್ತೀಚೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಈಗ ವಿಡಿಯೋ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ನಿಶ್ವಿಕಾ ನಾಯ್ಡು ಮತ್ತು ಶರಣ್ ನಟಿಸಿರುವ ‘ಗುರುಶಿಷ್ಯರು’ ಸಿನಿಮಾದ ‘ಆಣೆ ಮಾಡಿ ಹೇಳುತ್ತೇನೆ ನಾನು ನಿನ್ನವನು’ ಹಾಡಿಗೆ ಅಮೂಲ್ಯ ರೀಲ್ಸ್ ಮಾಡಿದ್ದಾರೆ. ನನ್ನ ಮೊದಲ ರೀಲ್ಸ್.. ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ, ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ತಮ್ಮ ಪೊಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
PublicNext
19/07/2022 10:54 am