ಕಾಪು : ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರ ತಾಯಿ ಸುಜಾತಾ ವೀರಪ್ಪ ಅಂಬಾರ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.
ಸುಜಾತರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನೇತಾರರಾದ ವೀರಪ್ಪ ಅಂಬಾರ್ ಇವರ ಧರ್ಮಪತ್ನಿ.ದುರ್ಗಾ ಪರಮೇಶ್ವರಿ ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತಾ ಅಂಬಾರ್ ಹಲವು ರೀತಿಯ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು.ಪೃಥ್ವಿ ಅಂಬಾರ್ ಚಿತ್ರರಂಗದಲ್ಲಿ ತೊಡಗಿಸಿಕೊಂಡು ದಿಯಾ ಸಿನಿಮಾದ ಮೂಲಕ ಮನೆ ಮಾತಾಗಿದ್ದಾರೆ.
PublicNext
16/07/2022 10:32 pm