ಬಿಗ್ ಬಾಸ್ 9ನೇ ಆವೃತ್ತಿ ಶುರುವಾಗಲಿದ್ದು, ಬಿಗ್ ಬಾಸ್ ಪ್ರೊಮೋ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಕನ್ನಡದ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಸಂಭವನೀಯ ಪಟ್ಟಿಯೂ ಸಿಕ್ಕಿದೆ. ಇವರ ಹೆಸರು ಸದ್ಯ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.
ಜ್ಯೋತಿಷಿ ಆರ್ಯವರ್ಧನ್, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ನಟ ಕಂ ನಿರ್ದೇಶಕ ನವೀನ್ ಕೃಷ್ಣ ಹಾಗೂ ನಟಿ ಪವಿತ್ರಾ ಲೋಕೇಶ್ ಹೆಸರು ಕೇಳಿ ಬಂದಿದೆ.
ಹೊಸ ಸೇರ್ಪಡೆಯಲ್ಲಿ ನಟಿ ನಮ್ರತಾ ಗೌಡ, ನ್ಯೂಸ್ ರೀಡರ್ ದಿವ್ಯಾ ವಸಂತ್, ಸರಿಗಮಪ ಶೋನ ಹನುಮಂತ, ಗಾಯಕ ರಘು ದೀಕ್ಷಿತ್, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಹೆಸರು ಈ ಬಾರಿ ಮುಂಚೂಣೆಯಲ್ಲಿ ಕೇಳಿ ಬರುತ್ತಿದೆ.
ರೂರಲ್ ಸ್ಟಾರ್ ಎಂದೇ ಖ್ಯಾತರಾಗಿರುವ ಅಂಜನ್ ಕೂಡ ಈ ಬಾರಿ ದೊಡ್ಮನೆಗೆ ಹೋಗುವಂತಹ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.ಈ ಲಿಸ್ಟ್ ನಲ್ಲಿರುವ ಕೆಲವರನ್ನೂ ಈಗಾಗಲೇ ವಾಹಿನಿಯು ಸಂಪರ್ಕ ಮಾಡಿದೆ ಎಂದೂ ಹೇಳಲಾಗುತ್ತಿದ್ದು ಫೈನಲ್ ಪಟ್ಟಿಯಲ್ಲಿ ಯಾರಿರಲಿದ್ದಾರೆ ಎಂದು ಕಾದು ನೋಡಬೇಕಿದೆ.
PublicNext
14/07/2022 10:15 pm