ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿತ್ಯಾನಂದ ಸ್ವಾಮಿ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ : ‘ಜೇಮ್ಸ್’ ಬೆಡಗಿ ಪ್ರಿಯಾ

ದಕ್ಷಿಣ ಭಾರತದ ಜನಪ್ರಿಯ ನಟಿ ಪ್ರಿಯಾ ಆನಂದ್ ತಾನು ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ರೆಡಿ ಇದ್ದೀನಿ ಎಂದು ಹೇಳಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಹೌದು ಮಲಯಾಳಂನ ಖ್ಯಾತ ನಟಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಜೇಮ್ಸ್ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಪ್ರಿಯಾ ಆನಂದ್ ನಿತ್ಯಾನಂದ ಸ್ವಾಮಿ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ದೇಶಬಿಟ್ಟು, ತಮ್ಮದೇ ದೇಶವೊಂದನ್ನು ನಿರ್ಮಿಸಿರುವ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದಾರೆ. ನಿತ್ಯಾನಂದ ಸ್ವಾಮಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವರನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದಿದ್ದಾರೆ.

ಕೆಲವು ತಿಂಗಳ ಹಿಂದೆ, ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಬಂದಿದ್ದವು. ಇದರ ನಡುವೆ ಖ್ಯಾತ ನಟಿ ಪ್ರಿಯಾ ಅವರ ಈ ಹೇಳಿಕೆಗಳು ಅಭಿಮಾನಗಳಲ್ಲಿ ಅಚ್ಚರಿ ಮೂಡಿಸಿದೆ. ನಿತ್ಯಾನಂದ ಅವರಿಗೆ ಈ ವಿಷಯವನ್ನು ತಲುಪಿಸುವುದು ಹೇಗೆ ಎಂಬ ಚರ್ಚೆ ಕೂಡ ನಡೆದಿದೆ. ಇದೊಂದು ತಮಾಷೆಯ ಮಾತಾಗಿದ್ದರೂ, ಪ್ರಿಯಾ ಆನಂದ್ ಗೆ ನಿತ್ಯಾನಂದನ ಮೇಲೆ ಅದು ಹೇಗೆ ಪ್ರೀತಿ ಮೂಡಿತು ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ.

ಇದೆಲ್ಲದಕ್ಕೂ ಉತ್ತರಿಸಿದ ನಟಿ ನಾನು ಈ ಹೇಳಿಕೆ ನೀಡಿ ಒಂದು ವಾರ ಕಳೆದಿದೆ. ಆದರೆ ನಾನು ಹೇಳಿದ್ದು ಕೇವಲ ತಮಾಷೆಗಾಗಿ ಅಷ್ಟೇ. ನಿತ್ಯಾನಂದ ಬಗ್ಗೆ ಮಾಡೋ ಟ್ರೋಲ್ಗಳು, ಮಿಮ್ಸ್ ಹಾಗೂ ಕಾಮಿಡಿ ವಿಡಿಯೋಗಳು ಎಂದರೇ ನನಗೆ ಇಷ್ಟ. ಅವರ ಫನಿ ಡೈಲಾಗ್ಸ್ ಅಥವಾ ಸ್ಟೇಟ್ ಮೆಂಟ್ಗಳನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ. ನಾನು ಮದುವೆ ಆಗ್ತಿನಿ ಎಂದಿದ್ದು ಜಸ್ಟ್ ಕಾಮಿಡಿ.. ಇದ್ದನ್ನು ದೊಡ್ಡದು ಮಾಡೋ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

10/07/2022 03:15 pm

Cinque Terre

41.99 K

Cinque Terre

3