ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಅಸ್ವಸ್ಥಗೊಂಡಿಲ್ಲ: ಆರೋಗ್ಯ ಸಮಸ್ಯೆ ಬಗ್ಗೆ ಮೌನ ಮುರಿದ ಶ್ರುತಿ ಹಾಸನ್

ಬಹುಭಾಷಾ ಶ್ರುತಿ ಹಾಸನ್ ಅವರು ಕೆಲವು ದಿನಗಳ ಹಿಂದೆ ತಾವು ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್‌) ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಆದರೆ ಈಗ ಅವರ ಆರೋಗ್ಯದ ಬಗ್ಗೆ ಕೆಲವು ವದಂತಿಗಳು ಕೇಳಿ ಬಂದಿದ್ದವು. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

"ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಅಸ್ವಸ್ಥಗೊಂಡಿಲ್ಲ. ಕೆಲವು ಮಾಧ್ಯಮಗಳು ನನಗಿರುವ ಪಿಸಿಒಎಸ್ ಸಮಸ್ಯೆಯನ್ನು ಪ್ರಮಾಣಕ್ಕಿಂತ ಮೀರಿಯೇ ವರದಿ ಮಾಡಿವೆ. ಹೀಗಾಗಿ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೇ ಎಂದು ಅನೇಕರು ಕರೆ ಮಾಡಿ ಕೇಳಿದರು. ಹೀಗಾಗಿ ನಾನು ಸ್ಪಷ್ಟನೆ ನೀಡುತ್ತಿರುವೆ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ" ಎಂದು ಶ್ರುತಿ ಹಾಸನ್ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

06/07/2022 09:23 am

Cinque Terre

62.21 K

Cinque Terre

1