ರಿಲೀಸ್ ಗೆ ಸಿದ್ದವಾಗಿರುವ ಕಿಚ್ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ.
ಸದ್ಯ ಸ್ಯಾಂಡಲ್ ವುಡ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾದ್ದೇ ಸುದ್ದಿ. ಈಗ ಚಿತ್ರತಂಡ ರಾ ರಾ ರಕ್ಕಮ್ಮ ಗ್ರ್ಯಾಂಡ್ ಸಕ್ಸಸ್ ಬಳಿಕ ಈಗ ಎರಡನೇ ಹಾಡನ್ನು ಪ್ರೇಕ್ಷಕರ ಮುಂದಿಟ್ಟಿದ್ದು, ಸಾಹಿತ್ಯ, ಸಂಗೀತದಿಂದ ಈ ಹಾಡು ಪ್ರೇಕ್ಷಕರನ್ನು ಸೆಳೆಯುತ್ತಿದೆ.
ತಣ್ಣನೇ ಬೀಸೋ ಗಾಳಿ, ಹಾಡಿದೆ ಜೋ ಲಾಲಿ, ಈ ಮಡಿಲೆ ನಿನ್ನ ತೂಗೋ ಉಯ್ಯಾಲೆ ತೂಗೂ ಉಯ್ಯಾಲೆ ಎಂದು ಆರಂಭವಾಗೋ ಈ ಹಾಡಿನ ಸಾಲುಗಳು ಈಗ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿಯವರೇ ಸ್ವತಃ ಈ ಹಾಡಿಗೆ ಲಿರಿಕ್ಸ್ ಬರೆದಿದ್ದು, ಅಜನೀಶಗ ಲೋಕನಾಥ ಸಂಗೀತವಿದೆ.
ಈ ಸಾಹಿತ್ಯಕ್ಕೆ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.ವಿಕ್ರಾಂತ್ ರೋಣ ಸಿನಿಮಾದ ಇಂಗ್ಲೀಷ್, ಹಿಂದಿ,ತಮಿಳ ,ಕನ್ನಡ ಹಾಗೂಮಲೆಯಾಳಂನಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.
PublicNext
03/07/2022 10:51 pm