ಬೆಂಗಳೂರು: ಸ್ಟೈಲಿಶ್, ಕ್ಯೂಟ್ ಹಾಗೂ ಮುದ್ದಾದ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆಶಿಕಾ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದು, ಸಮುದ್ರದ ಮಧ್ಯೆ ಮತ್ಸ್ಯ ಕನ್ಯೆ ಕುಳಿತಂತೆ ಕಾಣುತ್ತಿದ್ದಾರೆ.ಸದ್ಯ ನಟಿ ಥಾಯ್ಲೆಂಡ್ ಸಮುದ್ರ ಕಿನಾರೆಯಲ್ಲಿ ಬೋಲ್ಡ್ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಪ್ರಸ್ತುತ ಆಶಿಕಾ ರಂಗನಾಥ್, ಚಂದನವನದ ಬಹು ಬೇಡಿಕೆ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಆಶಿಕಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಅವತಾರ ಪುರುಷ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇದರ ಮಧ್ಯೆ ಶೂಟಿಂಗ್ ನಿಂದ ಬಿಡುವು ಪಡೆದುಕೊಂಡಿದ್ದ ಆಶಿಕಾ, ಥಾಯ್ಲೆಂಡ್ ಪ್ರವಾಸಕ್ಕೂ ಹೋಗಿ ಬಂದಿದ್ದಾರೆ.
ಥಾಯ್ಲೆಂಡ್ ನ ಟಪ್ ಐಲ್ಯಾಂಡ್ ನ್ಯಾಚುರಲ್ ಬೀಚ್ ನಲ್ಲಿ ಕೆಂಪು ಬಣ್ಣದ ಬಿಕಿನಿ ಕಟ್ ಮತ್ತು ಜೀನ್ಸ್ ಶಾರ್ಟ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
PublicNext
30/06/2022 04:09 pm