ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಅಭಿನಯಿಸಿದ “ಯು ಐ” ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭಗೊಂಡಿದೆ. ಬಹು ದಿನಗಳ ಬಳಿಕ ಉಪ್ಪಿ ಆ್ಯಕ್ಷನ್ ಕಟ್ ಹೇಳುತ್ತಿದ್ದಂತೆ ಸೆಟ್‌ನಲ್ಲಿದ್ದ ಯುವ ಟೆಕ್ನಿಷನ್‌ಗಳು ರೋಮಾಂಚನಗೊಂಡರು.
ಉಪ್ಪಿ ನಿರ್ದೇಶನದ ಈ ಚಿತ್ರದ ಮುಹೂರ್ತ ಇತ್ತೀಚಿಗೆ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. ಅಂದಿನಿಂದಲೇ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇದೆ. ರಿಯಲ್ ಸ್ಟಾರ್ ಉಪೇಂದ್ರ 7 ವರ್ಷದ ಬಳಿಕ ಈಗಲೇ ಈ ಚಿತ್ರದ ಮೂಲಕ ಡೈರೆಕ್ಷನ್ ಮಾಡ್ತಿದ್ದಾರೆ. ಉತ್ಸಾಹಿ ಯುವಕರ ತಂಡ ಕಟ್ಟಿಕೊಂಡು ಉಪ್ಪಿ ಸಿನಿಮಾ ಮಾಡ್ತಿದ್ದಾರೆ. ಲಹರಿ ಫಿಲಂಸ್ ಮತ್ತು ವೀನಸ್ ಎಂಟರಪ್ರೈಸಸ್ ಈ ಚಿತ್ರವನ್ನ ನಿರ್ಮಿಸುತ್ತಿದೆ.
-ರೇವನ್ ಪಿ.ಜೇವೂರ್, ಎಂಟರಟೈನಮೆಂಟ್ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
28/06/2022 12:03 pm