ಕಾಲಿವುಡ್ ಸ್ಟಾರ್ ಧನುಷ್ ನಟನೆಯ `ತಿರುಚಿತ್ರಂಬಲಂ’ ಚಿತ್ರದ `ಥಾಯ್ ಕೆಲ್ವೈ’ ಸಾಂಗ್ ರಿಲೀಸ್ ಆಗಿದ್ದು, ನಟ ಧನುಷ್ ಸಾಹಿತ್ಯ ಬರೆದು, ಹಾಡಿದ್ದಾರೆ. ಈಗ ಧನುಷ್ ಬರೆದಿರುವ ಸಾಹಿತ್ಯಕ್ಕೆ ಸಾಮಾಜಿಕ ಕಾರ್ಯಕರ್ತೆ ಫುಲ್ ಗರಂ ಆಗಿದ್ದಾರೆ.
`ತಿರುಚಿತ್ರಂಬಲಂ’ ಚಿತ್ರವು ಮ್ಯೂಸಿಕ್ ಲವ್ ಸ್ಟೋರಿಯಾಗಿದೆ. ಚಿತ್ರದಲ್ಲಿ ಧನುಷ್, ನಿತ್ಯ ಮೆನನ್, ರಾಶಿ ಖನ್ನಾ ನಟಿಸಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ಳುವುದರ ಜತೆಗೆ `ಥಾಯ್ ಕೆಲ್ವೈ’ ಸಾಹಿತ್ಯ ಬರೆದು ಹಾಡಿದ್ದಾರೆ. ಸದ್ಯ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಹಾಡಿನ ಸಾಹಿತ್ಯವನ್ನು ಬದಲಿಸಿ ಎಂದು ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ.
ಹಾಡಿನ ಸಾಹಿತ್ಯವು ತಮಾಷೆಯಾಗಿ ಕಂಡು ಬಂದರೂ ಅದರ ಕೆಲವು ಪದಗಳು ಹಿರಿಯರಿಗೆ ಅಗೌರವ ತರುವಂತಹ ಪದವಾಗಿದೆ ಹಾಗಾಗಿ ಹಾಡಿನ ಸಾಹಿತ್ಯ ಬದಲಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಆಗಸ್ಟ್ 18ರಂದು ತೆರೆಗೆ ಬರಲಿರುವ ಚಿತ್ರಕ್ಕೆ ಆರಂಭದಲ್ಲಿಯೇ ವಿಘ್ನವಾಗಿದೆ.
PublicNext
27/06/2022 08:54 pm