ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್‌ನಲ್ಲಿ ಇಲ್ಲಿವರೆಗೂ ಇದ್ದ ಒಂದಷ್ಟು ಕುತೂಹಲಗಳಿಗೆ ಉತ್ತರವೂ ಸಿಕ್ಕಿದೆ. ಕಿಚ್ಚನ ಪಾತ್ರದ ಸುತ್ತ ಮತ್ತಷ್ಟು ಇನ್ನಷ್ಟು ಕುತೂಹಲ ಹೆಚ್ಚಿದೆ.
ವಿಕ್ರಾಂತ್ ರೋಣ ಟ್ರೈಲರ್ ಸೂಪರ್ ಆಗಿಯೇ ಇದೆ. ಇನ್ನಷ್ಟು ಮತ್ತಷ್ಟು ಅನ್ನೋ ಹಾಗೆ ಕುತೂಹಲ ಕೆರಳಿಸುತ್ತಿದೆ. ಚಿತ್ರದಲ್ಲಿ ಏನೆಲ್ಲ ಇದೆ ಅನ್ನೋದನ್ನ ಹೇಳಿದ್ರು ಕೂಡ ಕಥೆ ಬಗ್ಗೆ ಈ ಟ್ರೈಲರ್ ಕ್ಯೂರಿಯೋಸಿಟಿ ಹೆಚ್ಚಿಸುತ್ತಲೇ ಇದೆ.
ಕಿಚ್ಚ ಸುದೀಪ್ ಪಾತ್ರದ ಪೊಲೀಸ್ ಪಾತ್ರ ಅನ್ನೋದನ್ನ ಈ ಟ್ರೈಲರ್ ರಿವೀಲ್ ಮಾಡಿದೆ. ಆದರೆ, ಈ ಡಾರ್ಕ್ ಊರಿನಲ್ಲಿರೋ ಆ ಡೆವಿಲ್ ಯಾರೂ ಅನ್ನೋದನ್ನ ಪ್ರಶ್ನೆಯಾಗಿಯೇ ಉಳಿಸಿದೆ.
ಚಿತ್ರದ ಕ್ಯಾಮೆರಾವರ್ಕ್, ಆರ್ಟ್ ವರ್ಕ್ ಮತ್ತು ಕಿಚ್ಚನ ಖದರ್ ಎಲ್ಲವೂ ಈ ಒಂದು ಟ್ರೈಲರ್ ನಲ್ಲಿ ಝಲಕ್ ರೂಪದಲ್ಲಿಯೇ ಸಿಗುತ್ತದೆ. ಇಡೀ ಚಿತ್ರದ ಸಂಕ್ಷಿಪ್ತ ಚಿತ್ರಣದಂತೇನೆ ಇರೋ ಈ ಟ್ರೈಲರ್ ನಲ್ಲಿ ಸದ್ಯಕ್ಕೆ ಇರೋದೆಲ್ಲ ಪ್ಲಸ್ ಪಾಯಿಂಟ್ಸ್ ಗಳೇ. ಇಡೀ ಸಿನಿಮಾದಲ್ಲೂ ಈ ಪ್ಲಸ್ ಗಳೇ ಜನರ ಹೃದಯ ಕದಿಯೋದು ಗ್ಯಾರಂಟಿ ಅನ್ನೋದನ್ನ ಈ ಟ್ರೈಲರ್ ಈಗಲೇ ಹೇಳಿ ಬಿಟ್ಟಿದೆ.
ನಿರ್ಮಾಪಕ ಜಾಕ್ ಮಂಜು ನಿರ್ಮಾಣದ ಈ ಚಿತ್ರದ ಬಗ್ಗೆ ಭಾರೀ ಭರವಸೆ ಇದೆ. ಅಜನೀಶ್ ಲೋಕನಾಥ್ ಸಂಗೀತ ಕೂಡ ಈ ಒಂದು ಚಿತ್ರಕ್ಕೆ ಪ್ಲಸ್ ಆಗಿದೆ. ಡೈರೆಕ್ಟರ್ ಅನೂಪ್ ಭಂಡಾರಿ ಕಲ್ಪನೆ ಕನ್ನಡಕ್ಕೆ ಹಾಲಿವುಡ್ ಟಚ್ ಕೊಟ್ಟಂತಿದೆ.
ಜಾಕ್ಲಿನ್ ಫರ್ನಾಂಡಿಸ್ ಕೂಡ ಈ ಚಿತ್ರದ ಹೈಲೈಟ್ಸ್ ಗಳಲ್ಲಿ ಒಬ್ಬರಾಗಿ ನಿಲ್ತಾರೆ. ಒಟ್ಟಾರೆ, ವಿಕ್ರಾಂತ್ ರೋಣ ಜುಲೈ-28ಕ್ಕೆ ಬಂದು ಪ್ರೇಕ್ಷಕರ ದಿಲ್ ಕದಿಯಲಿದೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
23/06/2022 08:38 pm