ಗೋವಾ ಟ್ರಿಪ್ ನಲ್ಲಿ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದ ನಟ ದಿಗಂತ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಸದ್ಯ ನಟನ ಆರೋಗ್ಯ ಚೇತರಿಕೆಯಾದ ಬೆನ್ನಲ್ಲೇ ನಟಿ ಐಂದ್ರಿತಾ ರೇ ಅಭಿಮಾನಿಗಳಿಗೆ, ಚಿತ್ರರಂಗದ ಸ್ನೇಹಿತರಿಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಕುಟುಂಬದ ಜತೆ ಗೋವಾ ಟ್ರಿಪ್ ಗೆ ಹೋಗಿದ್ದ ನಟ ದಿಗಂತ್ ಸೊಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೀಗ ಆರೋಗ್ಯದಲ್ಲಿ ನಟ ದಿಗಂತ್ ಸ್ಥಿರವಿರುವ ಕಾರಣ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಇದೀಗ ದಿಗಂತ್ ಆರೋಗ್ಯದ ಅಪ್ ಡೇಟ್ ಕೊಡುವುದರ ಜತೆಗೆ ಅಭಿಮಾನಿಗಳಿಗೆ, ಹಿತೈಷಿಗಳಿಗೆ ನಟಿ ಐಂದ್ರಿತಾ ರೇ ಧನ್ಯವಾದ ತಿಳಿಸಿದ್ದಾರೆ.
ಇನ್ನು ದಿಗಂತ್ ಕೂಡ ಆದಷ್ಟು ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.
PublicNext
23/06/2022 03:12 pm