ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೇದಿಕೆಗೆ ಓಡಿ ಬಂದು ರಕ್ಷಿತ್ ಶೆಟ್ಟಿಯನ್ನ ಅಪ್ಪಿಕೊಂಡ ಕಿಚ್ಚ

ಬೆಂಗಳೂರು: 'ವಿಕ್ರಾಂತ್ ರೋಣ' ಟ್ರೈಲರ್‌ ಬಿಡುಗಡೆಯ ವಿಶೇಷ ಕಾರ್ಯಕ್ರಮ ಹಲವು ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ಕಿಚ್ಚ ಸುದೀಪ್‌ ಹಾಗೂ ನಟ ರಕ್ಷಿತ್ ಶೆಟ್ಟಿ ನಡುವಿನ ಸ್ನೇಹ ಸಂಬಂಧವಂತೂ ಎಲ್ಲರ ಗಮನ ಸೆಳೆಯಿತು.

ಕಿಚ್ಚ ಸುದೀಪ್‌ ಅವರ ಹೀರೋಯಿಸಮ್ ಕುರಿತು ಮನಸ್ಸು ತುಂಬಿ ಮಾತನಾಡಿದ ಸಿಂಪಲ್‌ ಸ್ಟಾರ್ ರಕ್ಷಿತ್ ಶೆಟ್ಟಿ, 'ಸುದೀಪ್‌ ಅವರ ಸಿನಿಮಾಗಳನ್ನ ನೋಡುತ್ತಾ ಬೆಳೆದವರು ನಾವು. ಪ್ರತಿ ಬಾರಿ ಸುದೀಪ್ ಅವರು ನನ್ನ ಸಿನಿಮಾ ನೋಡಿದಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಸುದೀಪ್ ಸರ್ ಭೇಟಿ ಮಾಡಿದ ಮೇಲೆ ಅವರು ನನ್ನ ಹೀರೋ ಆಗಿಬಿಟ್ಟರು. ಭಾರತದ ಟಾಪ್ 5 ಸ್ಟಾರ್‌ಗಳು ಯಾರು ಅಂದ್ರೆ ಸುದೀಪ್ ಅವರು ಮೊದಲಿಗರು' ಎಂದು ರಕ್ಷಿತ್ ಶೆಟ್ಟಿ ಹೇಳಿದರು. ಈ ವೇಳೆ ದಿಢೀರ್‌ ಎದ್ದು ಬಂದ ಕಿಚ್ಚ ಸುದೀಪ್‌ ಅವರು ರಕ್ಷಿತ್ ಶೆಟ್ಟಿ ಅವರನ್ನು ತಬ್ಬಿಕೊಂಡರು.

Edited By : Vijay Kumar
PublicNext

PublicNext

23/06/2022 12:06 pm

Cinque Terre

89.95 K

Cinque Terre

1