ಪ್ರೀತಿಸಿ ಮದುವೆಯಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಜೋಡಿಗೆ ವಮಿಕಾ ಎನ್ನುವ ಮುದ್ದಾದ ಮಗಳಿದ್ದಾಳೆ.
ಸದ್ಯ ಇವರಿಬ್ಬರ ವಿಡಿಯೋವೊಂದು ವೈರಲ್ ಆಗಿದ್ದು ಮತ್ತೊಂದು ಪುಟಾಣಿ ಆಗಮನವೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೌದು ಮಾಲ್ಡೀವ್ಸ್ ಪ್ರವಾಸ ಮುಗಿಸಿದ ವಿರುಷ್ಕಾ ಜೋಡಿ ಸೀದಾ ಹೋಗಿದ್ದು ಮುಂಬಯಲ್ಲಿರುವ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ.
ಸದ್ಯ ಈ ಜೋಡಿಯನ್ನು ಆಸ್ಪತ್ರೆಯಲ್ಲಿ ಕಂಡ ಅಭಿಮಾನಿಗಳಿಗೆ ಅನುಷ್ಕಾ ಮತ್ತೆ ತಾಯಿಯಾಗಲಿದ್ದಾರೆ ಎಂದು ಮಾತನಾಡುತ್ತಿದ್ದಾರೆ.
ಈಗಾಗಲೇ ಒಂದು ಮುದ್ದಾದ ಮಗಳ ತಂದೆ-ತಾಯಿ ಆಗಿರೋ ಈ ಜೋಡಿ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವುದು ಸತ್ಯವಾದಲ್ಲಿ ವಿರುಷ್ಕಾ ಅಭಿಮಾನಿಗಳಿಗೆ ಸಂತಸದ ಸುದ್ದಿ ಅಂದ್ರೆ ತಪ್ಪಾಗಲಿಕ್ಕಿಲ್ಲ.
PublicNext
15/06/2022 07:35 pm