ಕನ್ನಡದ ಪುಟ್ಟ ಪರದೆಯ ಕನ್ನಡತಿ ಸೀರಿಯಲ್ ಹೀರೋ ಕಿರಣ್ ರಾಜ್ ದೊಡ್ಡಪರದೆಗೆ ಬಂದಿದ್ದಾರೆ. ಪುಟ್ಟ ಪರದೆ ಮೂಲಕವೇ ಮನೆ ಮನೆಗೂ ಪ್ರವೇಶ ಮಾಡಿರೋ ಕಿರಣ್ ರಾಜ್ , ಬಡ್ಡೀಸ್ ಚಿತ್ರದ ಮೂಲಕ ಸಿನಿಪ್ರೇಮಿಗಳ ಹೃದಯ ಗೆಲ್ಲೋಕೆ ಬರ್ತಾಯಿದ್ದಾರೆ.
ಹೌದು. ಕಿರಣ್ ರಾಜ್ ಅಭಿನಯದ ಬಡ್ಡೀಸ್ ಚಿತ್ರದ ಬಗ್ಗೆ ಸ್ವತಃ ಕಿರಣ್ ರಾಜ್ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ್ದಾರೆ. ಚಿತ್ರದ ವಿವರಗಳನ್ನೂ ತಮ್ಮದೇ ಶೈಲಿಯಲ್ಲಿ ತಮ್ಮ ಅಭಿಮಾನಿಗಳೂ ಈಗಲೇ ನೀಡಿದ್ದಾರೆ.
ಅಂದ್ಹಾಗೆ ಈ ಚಿತ್ರವನ್ನ ಗುರುತೇಜ್ ಶೆಟ್ಟಿ ಡೈರೆಕ್ಟ್ ಮಾಡಿದ್ದಾರೆ. ವಿಶೇಷ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರೋ ಈ ಚಿತ್ರದಲ್ಲಿ ಕಿರಣ್ ರಾಜ್‌ಗೆ ಶ್ರೀ ಪ್ರಹ್ಲಾದ್,ಗೋಪಾಲ್ ದೇಶಪಾಂಡೆ,ಅರವಿಂದ್ ಬೋಲರ್,ಗಿರೀಶ್ ಜಟ್ಟಿ ಸಾಥ್ ಕೊಟ್ಟಿದ್ದಾರೆ. ಇದೇ ಜುಲೈ -24 ರಂದು ಬಡ್ಡೀಸ್ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.
PublicNext
11/06/2022 08:27 pm